ದಕ್ಷಿಣ ಅಮೇರಿಕಾದ ದೇಶವಾದ ಉರುಗ್ವೆಯ ಟ್ರಾಫಿಕ್ ಪೊಲೀಸರೊಬ್ಬರು ಓರ್ವ ಬೈಕ್ ಸವಾರಿಯಲ್ಲಿದ್ದ ಓರ್ವ ಯುವತಿಯನ್ನು ತಡೆದು, ನಿಮ್ಮನ್ನು ನೋಡಿದರೆ ಇತರರ ಗಮನ ವ್ಯತಿಚಲಿಸಬಹುದು ಮತ್ತು ಅಪಘಾತ ವಾಗಬಹುದು ಎಂದು ಹೇಳಿ ಚಲನ್ ನೀಡಿದ ಘಟನೆ ನಡೆದಿದೆ.


ಆ ಸುಂದರಿಯನ್ನು ನೋಡಿ ಚಲನ್ ನೀಡಿದ್ದು ಮಾತ್ರವಲ್ಲ, ಆ ಚಲನ್ ನಲ್ಲಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ತಮ್ಮದೇ ಭಾಷೆಯಲ್ಲಿ ಬರೆದು ತಮ್ಮ ಪ್ರೀತಿಯನ್ನು ಪ್ರಕಟ ಮಾಡಿದ್ದಾರೆ.
ಈ ಚಲನನ್ನು ಆ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಇದೀಗ ನೆಟ್ಟಿಗರು ಆ ಟ್ರಾಫಿಕ್ ಪೊಲೀಸಧಿಕಾರಿಯನ್ನು ತುಂಬಾ ಟ್ರೊಲ್ ಮಾಡುತ್ತಿದ್ದಾರೆ.

ಮೇ 25 ರಂದು 3 ಗಂಟೆಯ ಹೊತ್ತಿಗೆ ಪೊಲೀಸಧಿಕಾರಿ ತಮ್ಮ ಕರ್ತವ್ಯದಲ್ಲಿದ್ದಾಗ ಹೀಗೆ ಮಾಡಿದ್ದರು. ಈ ಯುವತಿ ಟ್ರಾಫಿಕ್ ನಲ್ಲಿ ಬಂದು ಪೊಲೀಸಧಿಕಾರಿಯ ಮುಂದೆ ನಿಂತಾಗ ಆಕೆಯ ಸೌಂದರ್ಯಕ್ಕೆ ಪೊಲೀಸ್ ಕ್ಲೀನ್ ಬೌಲ್ಡ್ ಆಗಿದ್ದರು. ಬಳಿಕ ಸ್ಪ್ಯಾನಿಷ್ ಭಾಷೆಯಲ್ಲಿ ಪ್ರೇಮ ಪ್ರಕಟಿಸಿದರು.
ಕೆಲವರು ಈ ವ್ಯಕ್ತಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

Leave a Reply