ಹೊಸದಿಲ್ಲಿ: ಮುತ್ತಲಾಕ್ ಮಸೂದೆ ರಾಜ್ಯ ಸಭೆಯಲ್ಲಿ ಪಾಸಾಗದಿರಲು ಕಾಂಗ್ರೆಸ್ ಕಾರಣ ಎಂಬ ಬಿಜೆಪಿಯ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಬಿಜೆಪಿ ಆರೋಪದಲ್ಲಿ ಸತ್ಯಾಂಶವಿಲ್ಲ. ತಪ್ಪದು ಎಂದು ಕಾಂಗ್ರೆಸಿನ ಹಿರಿಯ ನಾಯಕ ಆನಂದ್ ಶರ್ಮ ಹೇಳಿದರು.

ಕಾಂಗ್ರೆಸ್ ಮುತ್ತಲಾಕ್ ಮಸೂದೆಯನ್ನು ವಿರೋಧಿಸಿಲ್ಲ. ಮುತ್ತಲಾಕ್ ಕ್ರಿಮಿನಲ್ ಅಪರಾಧಗೊಳಿಸುವ ಕುರಿತು ಬಿಜೆಪಿಯ ಮಿತ್ರ ಪಕ್ಷಗಳ ನಡುವೆ ಅಭಿಪ್ರಾಯ ವ್ಯತ್ಯಾಸಗಳಿವೆ. ಬಿಜೆಪಿಗೆ ಮುಸ್ಲಿಂ ಮಹಿಳೆಯರ ಕುರಿತು ಕಾಳಜಿಯಿದೆ ಎನ್ನುವುದು ಉತ್ತಮ ವಿಚಾರವಾಗಿದೆ. ಮಹಿಳಾ ಮೀಸಲಾಗಿ ಸಹಿತ ಇತ್ಯಾದಿ ವಿಷಯಗಳಲ್ಲಿ ಬಿಜೆಪಿ ನಿಲುವು ಏನೆಂದು ತಿಳಿಯಬಯಸುತ್ತೇನೆ ಎಂದು ಶರ್ಮ ಹೇಳಿದರು.

ಜಿಎಸ್ಟಿ ಮತ್ತು ನೋಟು ನಿಷೇಧವನ್ನೂ ಆನಂದ್ ಶರ್ಮ ಟೀಕಿಸಿದ್ದಾರೆ. ಜಿಎಸ್‍ಟಿಯಲ್ಲಿ ಹಲವಾರು ಉತ್ಪನ್ನಗಲಿಗೆ ಭಾರೀ ತೆರಿಗೆ ವಿಧಿಸಲಾಗಿದೆ. ಪೆಟ್ರೋಲ್ ಮದ್ಯ ಜಿಎಸ್‍ಟಿ ಹೊರಗೆ ಇದೆ. ನೋಟು ನಿಷೇಧ ದೇಶದ ಸಣ್ಣ ಉದ್ದಿಮೆ ಕ್ಷೇತ್ರವನ್ನು ನಾಶಪಡಿಸಿದೆ. ಮೋದಿ ಸರ್ವಾಧಿಕಾರಿ ಪ್ರಧಾನಿ ಎಂದು ಆನಂದ ಶರ್ಮ ಹೇಳಿದರು.

Leave a Reply