ಅಗರ್ತಲಾ : ಅತ್ಯಾಚಾರ ಆರೋಪ ಹಾಕಿದ ಮಹಿಳೆಯನ್ನೇ ಶಾಸಕರೊಬ್ಬರು ಮದುವೆಯಾದ ಪ್ರಸಂಗ ವರದಿಯಾಗಿದೆ. ತ್ರಿಪುರಾದ 29 ವರ್ಷ ವಯಸ್ಸಿನ ಶಾಸಕ ಧನಂಜಯ್ ರವರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ದೂರು ಸಲ್ಲಿಸಿದ್ದರು. ಹಲವು ಬಾರಿ ಹೋಗಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನಾ ಆಗಿರಲಿಲ್ಲ. ಇದೀಗ ಸ್ವತಃ ಶಾಸಕರೇ ಆ ಮಹಿಳೆಯನ್ನು ಮದುವೆಯಾಗುವುದರ ಮೂಲಕ ಒಂದು ನಿಟ್ಟಿನಲ್ಲಿ ಸಮಸ್ಯೆಯನ್ನು ಖುದ್ದು ಚಾಣಾಕ್ಷತನದಿಂದ ಪರಿಹರಿಸಿದ್ದಾರೆ.
ತ್ರಿಪುರಾದ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ಭಾಗವಾಗಿರುವ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ನಿಂದ ಸ್ಪರ್ಧಿಸಿ ಧನಂಜಯ್ ಗೆದ್ದಿದ್ದು, ಇವರ ಮದುವೆಯು ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಜರಗಿದೆ. “ಅಗರ್ತಲಾದ ಚತುರ್ದಾಸ್ ದೇವತಾ ದೇವಸ್ಥಾನದಲ್ಲಿ ನಾನು ಮಹಿಳೆಯನ್ನು ಮದುವೆಯಾಗಿದ್ದೇನೆ” ಎಂದು ಧನಂಜಾಯ್ ತ್ರಿಪುರಾ ಸೋಮವಾರ ಅಗರ್ತಲಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮದುವೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

”ನನಗೂ ಶಾಸಕನಿಗೂ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹಾಗೂ ಆತ ಅಗರ್ತಲಾದ ಅಭಯನಗರ್ ಪ್ರದೇಶದಲ್ಲಿರುವ ಮನೆಯಲ್ಲಿ ಹಲವಾರು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನನ್ನನ್ನು ಮದುವೆಯಾಗುವ ಭರವಸೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಆತ ನಂತರ ನನ್ನನ್ನು ತೊರೆದಿದ್ದ” ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದರು.

Leave a Reply