ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿರುವ ‌ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಚುನಾವಣಾ ಪೂರ್ವ ಬಿಜೆಪಿ ಕರ್ನಾಟಕ ಆಯೋಜಿಸಿದ ಪರಿವರ್ತನಾ ಸಮಾವೇಶದಲ್ಲಿ ನಡೆಸಿದ ಭಾಷಣದ ಬಳಿಕ ಫೇಸ್‌ಬುಕ್‌ನಲ್ಲಿ ಟ್ರೋಲ್‌ಗಳ ಸುರಿಮಳೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿವೃದ್ಧಿ ವಿಚಾರದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಯೋಗಿಯವರು, ಸಿದ್ದರಾಮಯ್ಯ ಅವರಿಗೆ ಹಿಂದೂಗಳ, ಗೋವಿನ ಬಗ್ಗೆ ಅನುಕಂಪವಿಲ್ಲ, ಅಭಿವೃದ್ಧಿ ವಿಚಾರದಲ್ಲೂ ಹಿಂದಿದ್ದಾರೆ ಎಂದಿದ್ದರು.

ಯೋಗಿ ಆದಿತ್ಯನಾಥ್ ರವರ ಭಾಷಣದ ತುಣುಕುಗಳು ವೈರಲ್ ಆಗುತ್ತಿದ್ದಂತೆ ಸಿಎಮ್ ಸಿದ್ದರಾಮಯ್ಯ ರವರು ಪ್ರತಿ ವಾಗ್ದಾಳಿ ನಡೆಸಿದ್ದರು.

ಇದರ ಬೆನ್ನಲ್ಲೇ ಫೇಸ್‌ಬುಕ್‌, ಟ್ವಿಟರ್ ಬಳಕೆದಾರರು ಯೋಗಿಯನ್ನು ವ್ಯಂಗ್ಯ ಮಾಡುವ ರೀತಿಯಲ್ಲಿ ಟ್ರೋಲ್‌ಗಳನ್ನು ನಡೆಸಿದ್ದಾರೆ.

1. ಉತ್ತರ ಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪಾನಿ ಪೂರಿ ಮಾರಲು ಬರುವ ಜನರೆಲ್ಲ ನಮಗೆ ಬುದ್ಧಿ ಮಾತು ಹೇಳಬೇಕಾಯಿತು.

2. ಪಾನಿಪೂರಿ ಮಾಡುವವರಿಂದ ನಾವೇನು ಕಲಿಯಲಿಕ್ಕಿದೆ, ಹೋಗಪ್ಪ ಯೋಗಿ.

3.ಬೀಫ್ ರಫ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿರುವ ಉತ್ತರ ಪ್ರದೇಶ ಗೋ ಪ್ರೀತಿ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ.

ಎಂಬಿತ್ಯಾದಿ ಹ್ಯಾಶ್ ಟ್ಯಾಗ್‌ಗಳು ಫೇಸ್‌ಬುಕ್‌, ಟ್ವಿಟರ್‌‌ನಲ್ಲಿ ರಾರಾಜಿಸುತ್ತಿದೆ. ಫೇಸ್‌ಬುಕ್‌ ಬಳಕೆದಾರರು ಇದೇ ಸಂದರ್ಭದಲ್ಲಿ ಈ ರೀತಿಯ ಹಲವು ಪ್ರಶ್ನೆ ಎತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಪತ್ಯಾರೋಪ, ವ್ಯಂಗ್ಯ ಶುರುವಾಗಿದೆ.

Leave a Reply