ಚಿಕ್ಕೋಡಿ : ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು ಎಂದು ಪದೇ ಪದೇ ಎಚ್ಚರಿಸಿದರೂ ಚಾಲಕರ ನಿರ್ಲಕ್ಷ್ಯದಿಂದ ಹಲವಾರು ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ವಾಹನ ಚಲಾಯಿಸುವ ವೇಳೆ ಮೊಬೈಲ್ ನಲ್ಲಿ ಮಾತನಾಡಿದ ಪರಿಣಾಮವಾಗಿ ವಾಹನವು ಕುರಿಗಳ ಮೇಲೆ ಹರಿದಿದ್ದು ೨೦ ಕುರಿಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಟಗೇರಿ ಗ್ರಾಮದ ಭಜಂತ್ರಿ ಬಡಾವಣೆಯ ಬಳಿ ನಡೆದಿದೆ.

ಚಾಲಕ ಪವನ್ ಬಿರಾದಾರ್ ಕುರಿಗಳ ಮೇಲೆ ವಾಹನ ಚಾಲಾಯಿಸಿದ ಚಾಲಕ. ಮೊಬೈಲ್ ನಲ್ಲಿ ಮಾತಾಡುತ್ತಿದ್ದರಿಂದ ಕುರಿಗಳನ್ನು ನೋಡದೆ ಅದರ ಮೇಲೆ ವಾಹನ ಹಾಯಿಸಲಾಗಿದ್ದು, ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.

ಕೆಲ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನು ಕೆಲವು ಕುರಿಗಳು ಸಾವು ಬದುಕಿನ ಹೋರಾಟ ನಡೆಸುತ್ತಿದೆ. ಇದೇ ವರ್ಷ ಮೇ ತಿಂಗಳಲ್ಲಿ ಕಾಶ್ಮೀರದ ಮುಘಲ್ ರಸ್ತೆಯಲ್ಲಿ ನಡೆದಿದ್ದು ಸ್ಥಳದಲ್ಲೇ ಸಾವಿಗೀಡಾದ ಕುರಿಗಳ ದಯನೀಯ ಚಿತ್ರಣವನ್ನು ಯೂಟ್ಯೂಬ್ ನಲ್ಲಿ ಹಾಕಲಾಗಿತ್ತು. ಮೊಬೈಲ್ ನಲ್ಲಿ ಮಾತಾಡಾಡುತ್ತ ಅಥವಾ ಓವರ್ ಸ್ಪೀಡ್ ನಲ್ಲಿ ವಾಹನ ಚಲಾಯಿಸುವ ಚಾಲಕರು ಹಳ್ಳಿ ಗುಡ್ಡ ಪ್ರದೇಶಗಳ ಮಾರ್ಗದಲ್ಲಿ ಹೋಗುವಾಗ ಎಷ್ಟು ಜಾಗ್ರಯೇ ವಹಿಸಿದರೂ ಸಾಲದು.

Leave a Reply