
ಸೌದಿ ಅರೇಬಿಯಾ ದೇಶವು ಈ ಹಿಂದೆ ಅಮೆರಿಕಾದೊಂದಿಗೆ ಸ್ನೇಹ ಬೆಳೆಸಿದ್ದು, ಸದ್ಯ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾ ಸೇನೆಯ ಬೆಂಬಲವಿಲ್ಲದೆ ನೀವು ಎರಡು ವಾರ ಕೂಡಾ ಅಧಿಕಾರದಲ್ಲಿ ಇರುವುದಿಲ್ಲ ಎಂದು ಸೌದಿ ಅರೇಬಿಯಾದ ರಾಜ ಸಲ್ಮಾನ್ ರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಮಿತ್ರ ದೇಶಕ್ಕೆ ಈ ರೀತಿಯ ವಾರ್ನಿಂಗ್ ನೀಡಿರುವುದು ಸದ್ಯ ಅಚ್ಚರಿಯೆನಿಸಿದೆ.
ನಾವು ಸೌದಿ ಅರೇಬಿಯಾವನ್ನು ರಕ್ಷಿಸುತ್ತಿದ್ದೇವೆ. ಅವು ಶ್ರೀಮಂತರು ಎಂದು ನೀವು ಹೇಳುತ್ತೀರಿ. ರಾಜ ಸಲ್ಮಾನ್ ಕಂಡರೆ ನನಗೂ ಪ್ರೀತಿ. ಆದರೆ, ನಾನು ಹೇಳಿದ್ದೆ, ‘ರಾಜ-ನಾವು ನಿಮ್ಮನ್ನು ರಕ್ಷಿಸುತ್ತಿದ್ದೇವೆ. ನಾವಿಲ್ಲದೆ ನೀವು ಎರಡು ವಾರವೂ ಇರಲಾರಿರಿ. ನಿಮ್ಮ ಸೇನೆಗಾಗಿ ನೀವು ಪಾವತಿ ಮಾಡಬೇಕಾಗುತ್ತದೆ’ ಎಂದು ಹೇಳಿದ್ದಾಗಿ ಟ್ರಂಪ್ ತಿಳಿಸಿದ್ದಾರೆ.
ಮಿಸ್ಸಿಸ್ಸಿಪ್ಪಿಯ ಸೌತ್ ಹೆವನ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಆದರೆ, ಸೌದಿ ಅರಸನ ಬಳಿ ಈ ಮಾತನ್ನು ಯಾವಾಗ ಹೇಳಿದ್ದು ಎಂಬುದನ್ನು ಟ್ರಂಪ್ ಪ್ರಸ್ತಾಪಿಸಿಲ್ಲ.