ಲಕ್ಟೋ : ಸೈನಿಕರು ಈ ದೇಶದ ಗಾಡಿಯನ್ನು ರಕ್ಷಿಸುವ ಮಹಾನ್ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ. ಆದರೆ ಅವರಿಗೇ ರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಬಾಫ್ ಪತ್ ನಲ್ಲಿ ರೆಸ್ಟೋರೆಂಟ್ ಒಂದರಲ್ಲಿ ದುಷ್ಕರ್ಮಿಗಳು ಇಬ್ಬರು ಯೋಧರಿಗೆ ದೊಣ್ಣೆಗಳಲ್ಲಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈನಿಕರು ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನ ಜೊತೆ ಮಾತಿನ ಚಕಮಕಿ ನಡೆದಿತ್ತು. ನಂತರ ಹೊಟೇಲ್ ಸಿಬ್ಬಂದಿಯೂ ಜೊತೆಗೂಡಿ ಮಾತಿಗೆ ಮಾತು ಬೆಳೆದು ಸೈನಿಕರಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, 8 ಮಂದಿಯನ್ನು ಬಂಧಿಸಲಾಗಿದೆ.

Leave a Reply