ಹೊಸದಿಲ್ಲಿ: ಗೋ ಏರ್ ವಿಮಾನ ಕಂಪೆನಿಯ ಇಬ್ಬರು ಸಿಬ್ಬಂಧಿಗಳನ್ನು ಮೊಬೈಲ್‍ಫೋನ್ ಕಳವು ಆರೋಪದಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.ಇವರು 53 ಮೊಬೈಲ್ ಫೋನ್ ಇದ್ದ ಪೆಟ್ಟಿಗೆಯನ್ನೇ ಲಪಟಾಯಿಸಿದ್ದರು. ಕಾರ್ಗೊ ವಿಭಾಗದ ಅನ್‍ಲೋಡ್ ಸೀನಿಯರ್ ರ್ಯಾಂಪ್ ಅಧಿಕಾರಿಗಳಾದ ಸಚಿನ್ ಮಾನವ(30), ಸತೀಶ್ ಪಾಲ್(40) ಎಂಬಿಬ್ಬರನ್ನು ಬಂಧಿಸಲಾಗಿದೆ.

ಪಾಟ್ನದಿಂದ ಗೋ ಏರ್ ಮೂಲಕ ಕಳುಹಿಸಲಾಗಿದ್ದ ಮೊಬೈಲ್‍ಗಳಿರುವ ಪೆಟ್ಟಿಗೆ ಕಾಣೆಯಾಗಿದೆ ಎಂದುಕಾರ್ಗೊ ಕಂಪೆನಿ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು.ಸೆಪ್ಟರ್ 19ರಂದು ಕೇಸು ದಾಖಲಾಗಿದ್ದು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮೊಬೈಲ್ ನಾಪತ್ತೆಯ ಕುರಿತು ಯಾವ ವಿವರವೂ ದೊರಕಿರಲಿಲ್ಲ.

ಕದ್ದುಹೋದ ಮೊಬೈಲ್‍ನನ್ನು ಹಲವು ದಿವಸಗಳಿಂದ ಟ್ರಾಕ್‍ ಮಾಡಿದ ಕಾರಣ ವಿಮಾನ ಕಂಪೆನಿ ಸಿಬ್ಬಂದಿಗಳು ಸಿಕ್ಕಿಬಿದ್ದಿದ್ದಾರೆ. ಕದ್ದ ಮೊಬೈಲ್‍ನ್ನು ಕನ್ವೇರ್ ಬೆಲ್ಟಿಗೆ ಹಾಕಿದ ಬಳಿಕ ಪ್ರಯಾಣಿಕರ ತರ ಅರೈವಲ್ ಟರ್ಮಿನಲ್‍ಗೆ ಬಂದು ಬ್ಯಾಗೆತ್ತಿ ಕೊಂಡು ಹೊರಗೆ ಹೋದೆವೆಂದು ಪೊಲೀಸರ ಮುಂದೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಮನೆಯಿಂದ 8 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಐದು ಮೊಬೈಲ್ ಫೋನ್‍ನ್ನು ಇವರು ಮಾರಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply