ಸಿಐಡಿ ಆಫಿಸರ್ ಎಂದು ವಂಚಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮನ್ನು ಸಿಐಡಿ ಆಫಿಸರ್ ಎನ್ನುತ್ತಾ ಜನರಿಂದ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಉತ್ತರ ಪ್ರದೇಶದ ರಾಮ್ಪುರದಿಂದ ಪೊಲೀಸರು ಬಂಧಿಸಿದ್ದಾರೆ.

ಎಹ್ತಿಷಾಮ್ ಮತ್ತು ಸಾಜಿದ್ ಅಲಿ ಎಂಬಿಬ್ಬರು, ಆ ಪ್ರದೇಶದಲ್ಲಿ ಸಿಐಡಿ ಆಫೀಸರಂತೆ ನಟಿಸಿ ಜನರಿಂದ ಹಣ ಲಪಟಾಯಿಸುತ್ತಿದ್ದರು. ಹಲವು ದಿನಗಳಿಂದ ಇವರು ಆ ಪ್ರದೇಶದಲ್ಲಿ ತುಂಬಾ ಸಕ್ರಿಯ ರಾಗಿದ್ದು, ಇದೀಗ ಪೊಲೀಸರೇ ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

“ಇವರು ತಮ್ಮನ್ನು ಸಿಐಡಿ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ಎಂದು ಬಿಂಬಿಸಿ ಜನರಿಂದ ಹಣ ವಸೂಲು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ “ಅವರ ಬಳಿ ನಕಲಿ ಸಿಐಡಿ ಗುರುತು ಚೀಟಿ, ಹಲವು ಎಟಿಎಂ ಕಾರ್ಡ್ ಗಳು ಹಾಗೂ ನಕಲಿ ಪಿಸ್ತೂಲನ್ನು ಕೂಡಾ ವಶ ಪಡಿಸಿ ಕೊಳ್ಳಲಾಗಿದೆ.

 

Leave a Reply