ಭಾರತದಲ್ಲಿ ದಿನದಿಂದ ದಿನಕ್ಕೆ ಸಂಚಾರ ವ್ಯವಸ್ಥೆ ಹದಗೆಡುತ್ತಿದ್ದು, ಇದಕ್ಕೆ ಮಿತಿಮೀರಿದ ವಾಹನವೇ ಕಾರಣ. ಅದರ ಜೊತೆ ಸಾಕಷ್ಟು ಅಪಘಾತಗಳು ಸಂಭವಿಸಿ ಜನರು ಜೀವ ಕಳಕೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಮಧ್ಯೆ ಟ್ರಾಫಿಕ್ ಪೊಲೀಸರು ಸಿಟಿ ಪ್ರದೇಶಗಳಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ದಿನ ರಾತ್ರೆ ಪರಿಶ್ರಮಿಸುತ್ತಾರೆ. ಅತಿವೇಗಕ್ಕಾಗಿ ಕುಡಿದು ವಾಹನ ಚಲಾಯಿಸಿದರೆ ದಂಡ ವಿಧಿಸುತ್ತಾರೆ. ತಪ್ಪಿಸಿ ಕೊಳ್ಳುವ ಚಾಲಕರನ್ನು ಹೇಗಾದರೂ ಮಾಡಿ ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಮುಂಬೈಯಲ್ಲಿ ಬೈಕ್ ಸವಾರನನ್ನು ಹಿಡಿಯಲು ಹೋದ ಪೊಲಿಸರ ಮೇಲೆಯೇ ಬೈಕ್ ಸವಾರ ಬೈಕ್ ಹರಿಸಿದ ವಿಡಿಯೋ ವೈರಲ್ ಆಗಿದೆ. ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸ್ ಅಧಿಕಾರಿ ರಸ್ತೆಯ ಮಧ್ಯೆ ಬಂದು ವಾಹನ ನಿಲ್ಲಿಸುವ ಮುಂಚೆ ಸವಾರ ಅವರಿಗೆ ಗುದ್ದಿ ಗಂಭೀರ ಗಾಯ ಗೊಳಿಸಿದ್ದಾನೆ. ಬಾಹ್ಯವಾಗಿ ಪೊಲೀಸಧಿಕಾರಿ ಹಾಗೆ ರಸ್ತೆಯ ಮಧ್ಯೆ ಹೋಗಬಾರದಿತ್ತು ಎಂಬದು ನೋಡುವಾಗ ಮನವರಿಕೆ ಆಗುತ್ತದೆ. ಇದರಿಂದ ಚಾಲಕನ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ. ವಿಡಿಯೋ ನೋಡಿ

Leave a Reply