ಧಾರವಾಡ : ವಿಶ್ವಶಾಂತಿ ಮತ್ತು ಮಾನವ ಕುಲದ ಏಕತೆ ಧಾರವಾಡ ಜಿಲ್ಲೆಯಲ್ಲಿ ವ್ಯಕ್ತಿಯೂಬ್ಬರು 40 ಕಿಲೋ ಮೀಟರ್ ಉರುಳು ಸೇವೆ ಆರಂಭಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಧಾರವಾಡ ನಗರದ ಚೌಕದಿಂದ ಆರಂಭಿಸಿ ಮೂರು ದಿನಗಳ ಬಳಿಕ ಎಮ್ಮೆಟ್ಟಿ ಗ್ರಾಮಕ್ಕೆ ಬಂದು ತಲುಪಿದರು.
ಕಳೆದ 19 ವರ್ಷಗಳಿಂದ ಇವರು ಇಂತಹದ್ದೇ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇವರ ಈ ಸೇವೆಯನ್ನು ಪರಿಗಣಿಸಿ ಹಲವಾರು ಇವರಿಗೆ ಬೆಂಬಲ ಸೂಚಿಸಿದ್ದಾರೆ. ತಮ್ಮ ಉರುಳು ಸೇವೆಯ ನಂತರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡಾ ಇವರು ಇಟ್ಟುಕೊಂಡಿದ್ದಾರೆ.
ವಿಶ್ವ ಶಾಂತಿ ಮತ್ತು ಮಾನವ ಕುಲದ ಏಕತೆ ಇಂದಿನ ತುರ್ತು ಅಗತ್ಯವಾಗಿದ್ದು ಅದಕ್ಕಾಗಿ ಎಲ್ಲರೂ ತಮ್ಮ ಕೊಡುಗೆ ನೀಡಬೇಕೆಂದು ಅವರು ಹೇಳಿದರು.