ಇಸ್ಲಾಮಾಬಾದ್ ಪೊಲೀಸರ ಕಂಟ್ರೋಲ್ ರೂಮಿಗೆ ಆಗಾಗ್ಗೆ ಫೋನ್ ಕರೆಗಳನ್ನು ಮಾಡಿ ‘ಜೈ ಹಿಂದ್’ ಘೋಷಣೆಗಳನ್ನು ಕೂಗಲು ಹೇಳುವ ಅನಾಮಿಕ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ ಪಾಕಿಸ್ತಾನದ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ದೂರವಾಣಿ ಕರೆ ಮಾಡುವ ಆ ಅನಾಮಿಕ ಭಾರತೀಯ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಡಿಸೆಂಬರ್ 25 ರಂದು ಆತ ಕರೆ ಮಾಡಿ ಹಿರಿಯ ಪೊಲೀಸಧಿಕಾರಿಗಳೊಂದಿಗೆ ಅನುಚಿತವಾಗಿ ಮಾತಾಡಿ ಬೆದರಿಕೆಗಳನ್ನು ಹಾಕಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಮೊದಲಿಗೆ ಭಾಷೆಯ ಮೂಲಕ ಆತನ ರಾಷ್ಟ್ರೀಯತೆಯನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ, ಆದರೆ ಆತ ನಿರಂತರವಾಗಿ ‘ಜೈ ಹಿಂದ್’ ಬಗ್ಗೆ ಪ್ರಸ್ತಾಪ ಮಾಡುವಾಗ ಆತ ಭಾರತೀಯನಾಗಿರಬಹುದೆಂದು ನಮಗೆ ಮನವರಿಕೆ ಆಯಿತು ಎಂದು ಅವರು ಹೇಳಿದ್ದಾರೆ.

ನಂತರ, ಆತ ತಾನು ಭಾರತದಿಂದ ಮಾತನಾಡುತ್ತಿದ್ದೇನೆ ಮತ್ತು ತನ್ನ ಹೆಸರು “ಜಾಶೆ” ಎಂದು ಹೇಳಿದ್ದಾನೆ ಎಂದು ಟ್ರಿಬ್ಯೂನ್ ಹೇಳಿದ್ದಾರೆ.

ಬೆಳಿಗ್ಗೆ 3:30 ರೊಳಗೆ ಕರೆಗಳು ಬರಲು ಪ್ರಾರಂಭವಾಗುತ್ತಿದ್ದವು. ಕರೆಯನ್ನು ಟ್ರೇಸ್ ಮಾಡಲು ಸಂಬಂಧ ಪಟ್ಟ ಇಲಾಖೆಗೆ ಹೇಳಿದ್ದೇವೆ. ನಂತರ ಕರೆಯ ಬಗ್ಗೆ ಖಚಿತಗೊಳಿಸುತ್ತೇವೆ ಎಂದು ಕಂಟ್ರೋಲ್ ರೂಮ್ ಸಬ್ ಇನ್ಸ್ಪೆಕ್ಟರ್ ಶಬ್ಬೀರ್ ಅಹ್ಮದ್ ಹೇಳಿದ್ದಾರೆ.

Leave a Reply