ಲಕ್ನೊ: ಟೆಂಪೊ ಚಾಲಕನೊಬ್ಬನನ್ನು ರಸ್ತೆಯ ಮಧ್ಯೆ ಪೊಲೀಸ್ ಸಿಬ್ಬಂದಿಯೊಬ್ಬ ಎಳೆದು ಹಾಕಿ ಥಳಿಸುವ ದೃಶ್ಯ ಬಹಿರಂಗವಾಗಿದೆ. ವಾಹನ ಅಪಘಾತ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸ್ ಕಾನ್ಸ್‍ಟೇಬಲ್ ಆನಂದ್ ಪ್ರಸಾದ್ ಕ್ರೂರವಾಗಿ ಥಳಿಸಿದ್ದಾರೆ.

ವೀಡಿಯೊದಲ್ಲಿ ಈ ದೃಶ್ಯಗಳು ಬಹಿರಂಗವಾಗಿದೆ. ಪೊಲೀಸ್ ಚಾಲಕನ ಕೂದಲು ಹಿಡಿದೆಳೆದು ನೆಲಕ್ಕೆ ಬೀಳಿಸಿ ಶೂಹಾಕಿದ ಕಾಲಿನಲ್ಲಿ ಕಾನ್ಸ್‍ಟೇಬಲ್ ಚಾಲಕನ ಕಾಲಿಗೂ ಎದೆಗೂ ತುಳಿಯುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ವೀಡಿಯೊದಲ್ಲಿ ಕಾಣಿಸುತ್ತಿದೆ. ಹೊಡೆಯುವ ಸಮಯದಲ್ಲಿ ಚಾಲಕನತ್ತ ಕಾನ್ಸ್‍ಟೇಬಲ್ ಆಕ್ರೋಶ ವ್ಯಕ್ತಪಡಿಸಿದ್ದು ಕಾಣಿಸುತ್ತಿದೆ. ಚಾಲಕ ಎದೆಗೆ ಕಾಲಿಟ್ಟು ಪೊಲೀಸ್ ವಿಚಾರಣೆ ನಡೆಸುತ್ತಿದ್ದಾನೆ.

ಆದರೆ ಕಾನ್ಸ್‍ಟೇಬಲ್ ಇಷ್ಟೆಲ್ಲ ಮಾಡುವಾಗಲು ಅಲ್ಲಿದ್ದ ಹಿರಿಯ ಪೊಲೀಸಧಿಕಾರಿ ಇವೆಲ್ಲವನ್ನು ನೋಡಿ ನಿಂತಿದ್ದಾರೆ. ತಡೆಯಲು ಮುಂದಾಗಿಲ್ಲ. ವೀಡಿಯ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೆ ವೈರಲ್ ಆಗಿದೆ. ಆನಂದ್ ಪ್ರಸಾದ್ ಸಿಂಗ್‍ನನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಬೇಕೆಂದು ಜನರಿಂದ ಬಲವಾದ ಪ್ರತಿಭಟನೆ ಕೇಳಿ ಬಂದಆತನನ್ನು ಅಮಾನತುಗೊಳಿಸಲಾಗಿದೆ. ಘಟನೆಯಲ್ಲಿ ನೋಡುತ್ತಾ ಕೈಕಟ್ಟಿ ನಿಂತ ಪೊಲೀಸಧಿಕಾರಿಯ ವಿರುದ್ಧವೂ ಕ್ರಮ ಜರಗಿಸಲಾಗಿದೆ.

Leave a Reply