ತಿರುವನಂತಪುರಂ: ಮಾಧ್ಯಮಗಳಲ್ಲಿ ಕೇರಳದ ಜಲಪ್ರಳಯದ ವಿಷಯ ತಿಳಿದು ಉತ್ತರಪ್ರದೇಶದ ವಿದ್ಯಾರ್ಥಿಯೊಬ್ಬ ರೈಲು ಹತ್ತಿ ಕೇರಳಕ್ಕೆ ಬಂದಿದ್ದಾನೆ. ಲಕ್ನೊದ ಬಿಟೆಕ್ ವಿದ್ಯಾರ್ಥಿ ತುಷಾರ್ ಈಗ ತಿರುವನಂತಪುರಂನ ಮಳೆ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಸಂಗ್ರಹಿಸುವ ಕೇಂದ್ರದಲ್ಲಿದ್ದಾನೆ.

ದಿಲ್ಲಿಯ ಸ್ವಯಂಸೇವಾ ಕೇಂದ್ರದಲ್ಲಿ ಹಣ ಕೊಟ್ಟು ಮರಳಿದ ತುಷಾರ್ ಕೇರಳದ ಸಂತ್ರಸ್ತರ ಪರಿಹಾರಕಾರ್ಯದಲ್ಲಿ ತೊಡಗಿಸಿಕೊಳ್ಳಲುನಿರ್ಧರಿಸಿದ್ದಾನೆ. ನಂತರ ಅತ್ತಿತ್ತ ನೋಡಲಿಲ್ಲ. ಕೂಡಲೇ ರೈಲು ಹತ್ತಿದ್ದಾನೆ.

ತಿರುವನಂತಪುರಂಗೆ ಬಂದ ಬಳಿಕ ಮನೆಯವರಿಗೂ ತಿಳಿಸದೆ ನಿರಾಶ್ರಿತರ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಜಿಲ್ಲಾಡಳಿತ ಸ್ಥಾಪಿಸಿದ ಕೇಂದ್ರದಲ್ಲಿ ಕಾಯಂ ಸ್ವಯಂಸೇವಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಊರಿಗೆ ತಕ್ಷಣ ಹೋಗಬೇಕಾಗಿಲ್ಲ ಎಂದು ತುಷಾರನ ನಿರ್ಧಾರ. ದಿಲ್ಲಿಗೋಲ್‍ಗೋಟ್ಟಿಯ ಕಾಲೇಜ್ ಅಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಆಯುಷ್ ತುಷಾರ್ ಬಿಟೆಕ್ ಕಲಿಯುತ್ತಿದ್ದಾನೆ.

Leave a Reply