ಯುಎಸ್ ರೆಸ್ಟೋರೆಂಟ್ ನಲ್ಲಿ ನೂಡಲ್ ಆರ್ಡರ್ ಮಾಡಿದ ಮಹಿಳೆಗೆ ನೂಡಲ್ಸ್ ನಲ್ಲಿ ಇಲಿಯಂತಿರುವ ದಂಶಕ ಪ್ರಾಣಿ ಸಿಕ್ಕಿದ್ದು, ಅದನ್ನು ಕಂಡು ಆಕೆ ಬೆಚ್ಚಿ ಬಿದ್ದಿದ್ದಾರೆ. ಗ್ರಾಹಕಿ ಮಹಿಳೆಯನ್ನು
ಡೇಯಾನಿರಾ ಕಾರ್ಟೆಸ್ ಎಂದು ಗುರುತಿಸಲಾಗಿದ್ದು, ಸತ್ತ ದಂಶಕಿಯನ್ನು ಕಂಡು ಆಕೆ ಫೇಸ್ಬುಕ್ನಲ್ಲಿ ಆಘಾತಕಾರಿ ವಿಡಿಯೋ ಶೇರ್ ಮಾಡಿದ್ದಾರೆ. ಇದು ಪ್ಲಾಸ್ಟಿಕ್ ಪ್ಯಾಕ್ ನೂಡಲ್ಸ್ ನಲ್ಲಿ ಜಿಗುಟಾದ ಬೇಯಿಸಿದ ದಂಶಕವನ್ನು ಎತ್ತಿ ತೋರಿಸುತ್ತಾ ಕಾರ್ಟೆಸ್ “ನನಗೆ ಅರ್ಥವಾಗುತ್ತಿಲ್ಲ, ಅದನ್ನು ಬೇಯಿಸಲಾಗಿಲ್ಲವೇ? ಅದಕ್ಕೆ ಹೆಚ್ಚುವರಿ ಶುಲ್ಕ ನೀಡಬೇಕೇ? ಅವರು ಹೆಚ್ಚುವರಿ ಪ್ರೋಟೀನ್ಗೆ ಹೆಚ್ಚು ಶುಲ್ಕ ವಿಧಿಸುತ್ತಾರೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.
ವಿಡಿಯೋ ನೋಡಿ ಸಾಮಾಜಿಕ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಆಕೆಯ ದೂರಿನ ಮೇರೆಗೆ ರೆಸ್ಟೋರೆಂಟನ್ನು ಮುಚ್ಚಲಾಗಿದೆ…

Leave a Reply