ಉಷಕುಮಾರಿಯವರ ಶಾಲೆಯ ದಿನನಿತ್ಯದ ಪ್ರಯಾಣ, ಬೆಳಿಗ್ಗೆ 7.30 ಗಂಟೆಗೆ ಆರಂಭವಾಗುತ್ತದೆ, ಕುಂಬಿಕಲ್ ಕಡವ ತನಕ ಪ್ರಯಾಣಿಸಲು ಅವರು ತನ್ನ ಸ್ಕೂಟಿಯನ್ನು ಆಶ್ರಯಿಸುತ್ತಾರೆ. ಅಲ್ಲಿಂದ ಅವರು ನದಿ ದಾಟಲು ಇನ್ನೊಂದು ದೀರ್ಘ ಪ್ರಯಾಣವನ್ನು ಪ್ರಾರಂಭಿಸುತ್ತಾರೆ..

ಬುಡಕಟ್ಟು ಜನಾಂಗದ ಮಕ್ಕಳಿಗೆ ಶಿಕ್ಷಣ ಕಲಿಸಲಿಕ್ಕಾಗಿ ತಿರುವನಂತಪುರಂ ಜಿಲ್ಲೆಯ ಅಂಬೂರಿ ಗ್ರಾಮದ ನಿವಾಸಿ, ಉಷಕುಮಾರಿ ಪ್ರತಿ ದಿನ ನದಿ, ಗುಡ್ಡ ಬೆಟ್ಟಗಳು ಮತ್ತು ವನ್ಯ ಮೃಗಗಳಿರುವ ಅಪಾಯಕಾರಿ ದಾರಿಯನ್ನು ಕ್ರಮಿಸುತ್ತಾರೆ.

ಒಂದೆರಡು ಕಿಲೋಮೀಟರ್ಗಳ ನಂತರ, ಕಾಡಾನೆಗಳು, ಚಿರತೆಗಳು ನೆಲೆಸಿರುವ ಉಷ್ಣವಲಯದ ದಟ್ಟ ಕಾಡಿನ ಮಧ್ಯೆ ಸಂಚರಿಸುತ್ತಾರೆ. ಆ ಬಳಿಕ ಅಗಾಸ್ತ್ಯರ್ಗಢಮ್ ಪ್ರದೇಶದ ಬೆಟ್ಟ ಹತ್ತುತ್ತಾರೆ. ಅದು ಸುಮಾರು 1,868-ಮೀಟರ್ (6,129 ಅಡಿ) ಎತ್ತರದಲ್ಲಿದೆ. ಅಲ್ಲಿ ಅವರು ಕಲಿಸುವ ಶಾಲೆ ಇದೆ. 2-ಗಂಟೆಗಳ ಆ ಭಯಾನಕ ಪ್ರಯಾಣ ಬೆಳೆಸಿಯೂ ಈ ಕಳೆದ 16 ವರ್ಷಗಳಲ್ಲಿ ಉಶಾಕುಮಾರಿ ಒಮ್ಮೆಯೂ ಶಾಲೆಗೆ ತಡವಾಗಿ ತಲುಪಿಲ್ಲ.

ಬೆಳಿಗ್ಗೆ 10:00 ರಿಂದ ಸಂಜೆ 4:00 ವರೆಗೆ ಕಾರ್ಯನಿರ್ವಹಿಸುವ ಈ ಶಾಲೆಯಲ್ಲಿ ಅವರು ಏಕೈಕ ಶಿಕ್ಷಕಿ. 1 ರಿಂದ 4 ರವರೆಗಿನ 14 ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಭಾಷೆ ಸೇರಿದಂತೆ ಎಲ್ಲಾ ವಿಷಯಗಳನ್ನು ಕಲಿಸುತ್ತಾರೆ.

“1999 ರಲ್ಲಿ ತಿರುವನಂತಪುರದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಮಕ್ಕಳಿಗೆ ಕಲಿಸಲಿಕ್ಕಾಗಿ ಸರಕಾರ ಓರ್ವ ಶಿಕ್ಷಕಿಯನ್ನು ನೇಮಿಸುವ ಯೋಜನೆ ರೂಪಿಸಿ ಶಾಲೆಗಳನ್ನು ಪ್ರಾರಂಭಿಸಿತು. ಅವರು ಕೇವಲ ಕಲಿಸುವುದಲ್ಲ ಬದಲಾಗಿ ಆ ಬಡ ಮಕ್ಕಳ ಸಮಗ್ರ ಬೆಳವಣಿಗೆಗೆ ಅವರು ಮುತುವರ್ಜಿ ವಹಿಸುತ್ತಾರೆ. ಅವರಿಗೆ ಮೊಟ್ಟೆ ಹಾಲು ಮತ್ತು ಇತರ ಪೌಷ್ಟಿಕ ಆಹಾರ ಕೊಡುತ್ತಾರೆ. ಇದೊಂದು ಸವಾಲಾಗಿದೆ. ಈ ಮಕ್ಕಳಿಗೆ ಕಲಿಸಲು ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧ. ಕೆಲವೊಮ್ಮೆ ಹಣ ಇಲ್ಲದಾಗ ಕೈಯಿಂದ ಹಣ ಹಾಕಿ ಮಕ್ಕಳ ಅವಶ್ಯಕತೆಗಳನ್ನು ಪೂರೈಸುತ್ತೇನೆ ” ಎಂದು ಉಷಕುಮಾರಿ ದಿ ನ್ಯೂಸ್ ಮಿನಿಟ್ಗೆ ಹೇಳಿದರು.

LEAVE A REPLY

Please enter your comment!
Please enter your name here