Representational Image

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್ ಬಸ್ ಸ್ಟ್ಯಾಂಡ್ ಆವರಣದಲ್ಲಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮಗುವನ್ನು ಕದಿಯುವ ವಿಡಿಯೋ ಸೆರೆಯಾಗಿದೆ. ಈ ವೀಡಿಯೊದಲ್ಲಿ, ಮಹಿಳೆಯ ಮತ್ತು ಪುರುಷನೊಬ್ಬ ತಾಯಿಯ ಪಕ್ಕದಲ್ಲಿ ಮಲಗಿದ್ದ ಎಂಟು ತಿಂಗಳ ಮಗುವನ್ನು ಅಪಹರಿಸಿದ್ದಾರೆ. ಮಕ್ಕಳ ಕಳ್ಳತನದ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಗುವಿನ ತಾಯಿಯ ಪ್ರಕಾರ,  ಮೊದಲು ಓರ್ವ ಯುವಕ ಮತ್ತು ಮಹಿಳೆ ಹತ್ತಿರ ಬಂದು ಮಾತನಾಡಲು ತೊಡಗಿದರು. ನನ್ನನ್ನು ಅವರು ವಿಶ್ವಾಸಕ್ಕೆ ತೆಗೆದು ಕೊಂಡರು. ಮಗುವಿಗೆ ಕಂಬಳಿ ಮತ್ತು ಔಷಧಿ ನೀಡಿದರು. ಬಳಿಕ ಹತ್ತಿರದ ಬಸ್ ಸ್ಟಾಂಡ್ ನಲ್ಲಿ ಅವರು ಮಲಗಿದರು. ನಾನೂ ಅವರ ಪಕ್ಕದಲ್ಲಿ ಮಲಗಿದ್ದೆ. ಸುಮಾರು ರಾತ್ರಿ 12: 00 ಕ್ಕೆ ಅವರು ನನ್ನ ಮಗುವನ್ನು ಅಪಹರಿಸಿದರು. ನನಗೆ ಎಚ್ಚರವಾದಾ ಮಗು ಕಾಣೆಯಾಗಿತ್ತು. ಕೂಡಲೇ ಈ ಬಗ್ಗೆ ಗಾಲ್ಶೀದ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದೆ ಎಂದು ಹೇಳಿದರು.

ಮಹಿಳೆ ಮಗುವಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಪೊಲೀಸರು ತನಿಖೆ ನಡೆಸಿ ಮಗುವನ್ನು ಪತ್ತೆ ಹಚ್ಚಿ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here