Photo courtesy : Aaj Tak

ಉತ್ತರ ಪ್ರದೇಶದ ಸರಕಾರದ ವಿರುದ್ಧ ಸಚಿವ ಸಂಪುಟದ ಒಳಗಿಂದಲೇ ವಿರೋಧ ವ್ಯಕ್ತವಾಗಿದೆ. ಆಪಲ್ ಎಕ್ಸಿಕ್ಯೂಟಿವ್ ವಿವೇಕ್ ತಿವಾರಿಯನ್ನು ಗುಂಡಿಟ್ಟು ಹತ್ಯೆಗೈದ ವಿಚಾರದಲ್ಲಿ ಸರಕಾರವನ್ನೇ ತರಾಟೆಗೆ ತೆಗೆಯಲಾಗಿದೆ. ಸಚಿವ ಸಂಪುಟದ ಮಿತ್ರ ಪಕ್ಷವಾದ ಸಹಲ್ ದೇವ್ ಭಾರತೀಯ ಸಮಾಜ ಪಾರ್ಟಿ ನೇತಾರ ಹಿಂದುಳಿದ ವರ್ಗಗಳ ಅಭಿವೃದ್ದಿ ವಿಭಾಗದ ಸಚಿವರೂ ಆದ ಓಂ ಪ್ರಕಾಶ್ ರಾಜ್ ಬರ್ ಸರಕಾರದ ವಿರುದ್ಧ ತೀವ್ರ ಟೀಕೆಗಿಳಿದಿದ್ದಾರೆ.

ವಿವೇಕ್ ತಿವಾರಿಯನ್ನು ಹತ್ಯೆಗೈದ ಘಟನೆಯನ್ನು ಮುಚ್ಚಿ ಹಾಕಲು ಶ್ರಮಿಸಿ ಉತ್ತರ ಪ್ರದೇಶದ ಪೋಲೀಸ್ ಇಲಾಖೆಯ ಕಾನೂನು ಪಾಲನೆ ಹಾಸ್ಯಾಸ್ಪದವಾಗಿದೆಯೆಂದೂ ಅವರು ಹೇಳಿದರು. ಎನ್ ಕೌಂಟರ್ ಹೆಸರಲ್ಲಿ ಹಣ ಪಡೆದು ಜನರನ್ನು ಕೊಲ್ಲುತ್ತಿದ್ದಾರೆ ಎಂದು ಹೇಳಿದ ಸಚಿವರು ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ ಸಂಪೂರ್ಣವಾಗಿ ವಿಫಲವಾಗಿದೆಯೆಂದೂ ಈ ಘಟನೆಯ ಕುರಿತು ತೀವ್ರ ತನಿಖೆಗಾಗಿ ಸಿ.ಬಿಐ ತನಿಖೆಗೆ ಒಪ್ಪಿಸಬೇಕೆಂದೂ ಅವರು ಹೇಳಿದರು.

Leave a Reply