Photo credit ; ANI

ಮುಂಬೈ : ಭಾರಿಪ್ ಬಹುಜನ ಮಹಾಸಂಘ(ಬಿಬಿಎಂ)ದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ವಂದೇ ಮಾತರಂ ಕುರಿತು ವಿವಾದಾಸ್ಪದ ಹೇಳಿಕೆ ನೀಡಿದ್ದು ಅವರು ಭಾರತದ ಸಂವಿಧಾನ ನಿರ್ಮಾತೃ ಡಾ. ಬಿ.ಆರ್.ಅಂಬೇಡ್ಕರ್ ಮೊಮ್ಮಗನಾಗಿದ್ದಾರೆ. ವಂದೇ ಮಾತರಂ ರಾಷ್ಟ್ರಗೀತೆ ಎನ್ನಲಾಗದು. ಜನಗನಮನ ರಾಷ್ಟ್ರಗೀತೆಯಾಗಿದೆ ಎಂದು ಅವರು ಹೇಳಿದರು.

ಒಂದು ವೇಳೆ ಜನಗಣಮನ ಹಾಡಿದರೆ ಭಾರತ ತಾನು ವಿರೋಧಿಯಾಗುವುದು ಮತ್ತು ವಂದೇ ಮಾತರಂ ಹಾಡುವುದರಿಂದ ನೈಜ ಭಾರತೀಯನಾಗುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ಮಂಗಳವಾರದಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತಾಡುತ್ತಿದ್ದರು. ದೇಶದಲ್ಲಿ ರಾಷ್ಟ್ರಗೀತೆ ಇದೆ. ಅದು ಜನಗಣಮನವಾಗಿದೆ. ಹೀಗಿರುವಾಗ ದೇಶಕ್ಕೆ ಇನ್ನೊಂದು ರಾಷ್ಟ್ರಗೀತೆಯಾಗಿ ವಂದೇ ಮಾತರಂನ ಅಗತ್ಯವಿಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.

ರಾಷ್ಟ್ರಗೀತೆ ಹಾಡುವ ಜನರು ರಾಷ್ಟ್ರವಾದಿಗಳು ಎಂದು ಕರೆಯಿಸಿಕೊಳ್ಳುತ್ತಾರೆ. ಆದರೆ ಯಾವುದೇ ವ್ಯಕ್ತಿ ವಂದೇ ಮಾತರಂ ಹಾಡದಿದ್ದರೆ ದೇಶದ್ರೋಹಿ ಆಗುವುದು ಹೇಗೆ? ವಂದೇ ಮಾತರಂ ಹಾಡದಿರುವವರಿಗೆ ದೇಶದ್ರೋಹಿ ಎಂಬ ಪ್ರಮಾಣ ಪತ್ರ ನೀಡಲು ಅವರು ಯಾರು ಎಂದು ಪ್ರಕಾಶ್ ಅಂಬೇಡ್ಕರ್ ಕಟುವಾಗಿ ಪ್ರಶ್ನಿಸಿದರು.

ಯಾರಿಗಾದರೂ ನ್ಯಾಶನಲ್ _ಆಂಟಿ ನ್ಯಾಶನಲ್ ಸರ್ಟಿಫಿಕೆಟ್ ಕೊಡಲು ನೀವು ಯಾರು? ನಾನು ವಂದೆಮಾತರಂ ಹಾಡುವವರನ್ನೇ ಭಾರತವಿರೋಧಿಗಳು(ಆಂಟಿ ಇಂಡಿಯ) ಎಂದು ಕರೆಯುತ್ತೇನೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.

Leave a Reply