Representational image

ಪಿಲಿಭಿತ್ (ಯುಪಿ) : ದೇಶದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯದ ಜನರು ಬಿಜೆಪಿಗೆ ಮತ ಹಾಕಿ ಆಶೀರ್ವಾದ ಮಾಡಿದ್ದರಿಂದ ಬಿಜೆಪಿಗೆ ದೊಡ್ಡ ಗೆಲುವಿನ ಪರಿಣಾಮ ಬಂದಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಸಂಸದನಾಗಿ ಆಯ್ಕೆಯಾದ ನಂತರ ಎರಡನೇ ಬಾರಿಗೆ ಇಲ್ಲಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ತಮ್ಮ ಮೇಲೆ ಅಧಿಕಾರ ಹೊಂದಿದ್ದು, ಜನಸಾಮಾನ್ಯರ ಕಲ್ಯಾಣಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಪಕ್ಷದ ಗೆಲುವಿಗೆ ಕಾರ್ಯಕರ್ತರು ನೂರರಷ್ಟು ಪ್ರಯತ್ನಿಸಿದ್ದಾರೆ. ಕೆಲ ಜನರು ತಮ್ಮನ್ನು ವಿರೋಧಿಸಿದ್ದರು. ಆದರೆ, ನಾನು ಅವರಿಗೆ ಗೌರವಿಸುತ್ತೇನೆ. ಏಕೆಂದರೆ, ಚುನಾವಣೆ ಸಂದರ್ಭದಲ್ಲಿ ಒಳಗಿನ ಹಾಗೂ ಹೊರಗಿನ ಸಮಸ್ಯೆಗಳನ್ನು ಜೋರಾಗಿ ಹೇಳುವಂತಹ ಸಾಹಸ ಅವರಲ್ಲಿತ್ತು ಎಂದರು.

ನಾನು ಅಲ್ಪಸಂಖ್ಯಾತ ಸಮುದಾಯದಿಂದ ಹೆಚ್ಚಿನ ಮತಗಳನ್ನು ಪಡೆಯಲಿಲ್ಲ, ಆದರೆ ಅಲ್ಪಸಂಖ್ಯಾತ ಸಮುದಾಯದ ಜನರು ನನಗೆ ಮತ ಹಾಕಿ ಆಶೀರ್ವಾದ ಮಾಡಿದ್ದಾರೆ. ಇನ್ನು ನಾನು ಈ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಮುಂದಿನ ನಲ್ವತ್ತು ವರ್ಷ ಇಲ್ಲೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದು ಅವರು ಹೇಳಿದರು.

Leave a Reply