ರಾಜಸ್ತಾನ್ : ಮೊಬೈಲ್ ಕೊಳ್ಳಲು ಐನೂರು ರೂಪಾಯಿ ಹಣ ನೀಡುವುದಾಗಿ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತದಾರರಿಗೆ ವಾಗ್ದಾನ ನೀಡಿದ್ದಾರೆ. ಈ ಮೊತ್ತ ಉಪಯೋಗಿಸಿ ಮೊಬೈಲ್ ಕೊಂಡ ಬಳಿಕ ಇಂಟರ್ನೆಟ್ ಸಂಪರ್ಕಕ್ಕೆ ಮತ್ತೆ ಐನೂರು ರೂಪಾಯಿ ನೀಡುವುದಾಗಿಯೂ ವಾಗ್ದಾನ ಮಾಡಿದ್ದಾರೆ.

ದೂರದ ಹಳ್ಳಿಗಳಲ್ಲಿರುವ ಜನರಿಗೆ ಮೊಬೈಲ್ ದೊರಕಿಸಿ ಸರಕಾರದ ವಿವಿಧ ಹೊಸ ಯೋಜನೆಗಳು ತಿಳಿಯುವಂತಾಗಲು ಹೀಗೆ ಮಾಡಲಾಗಿದ್ದು ಇದಕ್ಕೆ ಜಿಯೋ ಕಂಪೆನಿಯ ಸಹಾಯವನ್ನು ಪಡೆಯಲಿದೆ. ಮಾತ್ರವಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೂ ಮೊಬೈಲ್ ಕೊಟ್ಟು ಡಿಜಿಟಲ್ ಇಂಡಿಯಾದ ಯೋಜನೆಯನ್ನು ಬಲಪಡಿಸಲಾಗುವುದು ಎಂದು ಸರಕಾರ ಹೇಳಿದೆ.

ಸರಕಾರದ ಕೆಲವು ಯೋಜನೆಗಳು ಜನರಿಗೆ ನೇರವಾಗಿ ತಲುಪಲು ಇದು ನೆರವಾಗುತ್ತದೆಯೆಂದೂ ಅವರು ಹೇಳಿದ್ದಾರೆ. ಮುಖ್ಯ ಮಂತ್ರಿಗಳ ಈ ಹೊಸ ಯೋಜನೆ ಜನರನ್ನು ಓಟ್ ಬ್ಯಾಂಕ್ ಆಗಿ ಶೋಷಿಸುವ ತಂತ್ರವಿದು ಎಂದು ಕಾಂಗ್ರೇಸ್ ಟೀಕಿಸಿದೆ.

Leave a Reply