ಜಗತ್ತಿನ ಅತಿದೊಡ್ಡ ಶ್ರೀಮಂತರಾದ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಗ್ರಾಹಕರಿಗೆ ಐಸ್ಕ್ರೀಮ್ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ರವರು ಅಮೆರಿಕನ್ ರೆಸ್ಟಾರೆಂಟ್ನಲ್ಲಿ ಐಸ್ ಕ್ರೀಮ್ ಮಾರಾಟ ಮಾಡುವುದನ್ನು ಕಾಣಬಹುದು.
ನಾವು ಗ್ರಾಹಕರೊಂದಿಗೆ ವ್ಯವಹಾರ ಮಾಡಲು , ಕ್ಯಾಶ್ ಕೌಂಟರ್ ನಲ್ಲಿ ವ್ಯವಸ್ಥೆ ನೋಡಲು ಮತ್ತು ಐಸ್ಕ್ರೀಮ್ ಮಾಡಲು ಕಲಿತೆವು ಎಂದು ಬಿಲ್ ಗೇಟ್ಸ್ ಹೇಳಿದರು.
ಬಫೆಟ್ ಐಸ್ಕ್ರೀಮ್ ಮತ್ತು ಒರಿಯೋ ಬಿಸ್ಕತ್ ಉಪಾಹಾರದಲ್ಲಿ ತಿನ್ನುತ್ತಾರೆ ಎಂದು ಅವರು ಹೇಳಿದ್ದಾರೆ.
ವಿಶ್ವದ ಎರಡನೆಯ ಮತ್ತು ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಗಳಾದ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಆಗಾಗ ಇಂತಹ ಸಣ್ಣ ಪುಟ್ಟ ಕೆಲಸ ಮಾಡಿ ಜನರಿಗೆ ಮಾದರಿಯಾಗುತ್ತಿದ್ದಾರೆ. ಈ ಹಿಂದೆ ಬಿಲ್ ಗೇಟ್ಸ್ ಪಿಜ್ಜಾ ಖರೀದಿಸಲು ಸರತಿ ಸಾಲಿನಲ್ಲಿ ನಿಂತ ಫೋಟೋ ವೈರಲ್ ಆಗಿತ್ತು.

Leave a Reply