ಮಹಾರಾಷ್ಟ್ರ : 50 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಪುಣೆಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಭಾರತ ಸಜ್ಜಾಗಿದ್ದ ಸಮಯದಲ್ಲಿ ಕೊಹ್ಲಿ ಗಂಗೂಲಿಯನ್ನು ಮೀರಿ ಮೈಲಿಗಲ್ಲು ಸಾಧಿಸಿದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಮೊದಲ ಸ್ಥಾನದಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿ ಇದ್ದು, ಅವರು ಟೆಸ್ಟ್ ನಲ್ಲಿ 60 ಪಂದ್ಯಗಳಿಗೆ ಭಾರತಕ್ಕೆ ನಾಯಕತ್ವ ವಹಿಸಿದ್ದರು.
ಈ ವರ್ಷದ ಆರಂಭದಲ್ಲಿ, ಕೊಹ್ಲಿ ಧೋನಿ ಅವರನ್ನು ಮೀರಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟೆಸ್ಟ್ ನಾಯಕನಾಗಿ 49 ಪಂದ್ಯಗಳಲ್ಲಿ ಕೊಹ್ಲಿ 29 ಜಯಗಳಿಸಿದ್ದಾರೆ. ಎಂಎಸ್ ಧೋನಿ 60 ಪಂದ್ಯಗಳಿಂದ 27 ಟೆಸ್ಟ್ ಗೆಲುವು ಗಳಿಸಿದ್ದಾರೆ.

LEAVE A REPLY

Please enter your comment!
Please enter your name here