ಇತ್ತೀಚೆಗೆ ಪಬ್ಲಿಕ್ ಟಿವಿ ಎಂಬ ಕನ್ನಡ ದೃಶ್ಯ ಮಾಧ್ಯಮದ ‌ಉಪಟಳ ಹೆಚ್ಚಾಗಿದೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಭಾವಿ ಜನರಿಂದ ಹಿಡಿದು ಸಾಮಾನ್ಯ ಜನರವರೆಗೂ ಇಲ್ಲದ ಸಲ್ಲದ ವಿಚಾರಗಳನ್ನು ಕೆದಕಿ, ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾ ನಾವೇ ನಂಬರ್ ವನ್ ಚಾನೆಲ್ ಎಂದು ಬೊಬ್ಬಿಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ. ಇತ್ತೀಚೆಗೆ ಟಿವಿ9 ಪಬ್ಲಿಕ್ ಟಿವಿಯ ಚುನಾವಣಾ ಸಮೀಕ್ಷೆಯ ವಿರುದ್ಧ ಸುದ್ದಿ ಭಿತ್ತರಿಸಿತ್ತು.
ಅದರಲ್ಲೂ ನಿನ್ನೆ ಮಂಗಳೂರಿನಲ್ಲಿ ನಡೆದ ಘಟನೆಯಂತೂ ಪಬ್ಲಿಕ್ ಟಿವಿಗೆ ಸಕ್ಕತ್ ಮುಜುಗರವನ್ನು ತರಿಸಿದೆ.

ಏನಿದು ಘಟನೆ?

ಕಳೆದ ಐದು ದಿನದ ಹಿಂದೆ ದೀಪಕ್ ರಾವ್ ಎನ್ನುವ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆಗೈದಿದ್ದು, ಅದೇ ದಿನ ರಾತ್ರಿ ಫಾಸ್ಟ್ ಫುಡ್ ಅಂಗಡಿಯನ್ನು ಮುಚ್ಚಿ ಬರುತ್ತಿದ್ದ ಬಶೀರ್ ಎಂಬ ಅಮಾಯಕ ವ್ಯಕ್ತಿಯ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಬಶೀರ್‌ರನ್ನು ಓರ್ವ ಹಿಂದೂ ವ್ಯಕ್ತಿ ಆಸ್ಪತ್ರೆಗೆ ದಾಖಾಲಿಸಿದ್ದರು.‌ ಆದರೆ ಚಿಕಿತ್ಸಾ ಫಲಕಾರಿಯಾಗದೆ ಬಶೀರ್ ನಿನ್ನೆ ಬೆಳಗ್ಗೆ ಕೊನೆಯುಸಿರೆಳೆದರು. ಬಶೀರ್ ಸಾವಿನ ಸುದ್ದಿ ಎಲ್ಲ ಮಾಧ್ಯಮಗಳಲ್ಲೂ ಪ್ರಸಾರವಾಗುತ್ತಿದ್ದಂತೆ ಪಬ್ಲಿಕ್ ಟಿವಿ ಆ್ಯಂಕರ್‌ ಓರ್ವ ಬಶೀರ್ ತಲಾವಾರು ಹಿಡಿದು ಕಾಳಗ ನಡೆಸಿದ್ದಾರೆ ಎಂದು ಪುಂಖಾನುಪುಂಖವಾಗಿ ವರದಿಯನ್ನು ಮಾಡಿದ್ದರು. ವರದಿಯ ಆಡಿಯೋ ವೈರಲ್ ಆಗಿದೆ.

ಬಶೀರ್ ಮತ್ತು ಹಿಂದೂಗಳ ನಡುವೆ ತಲಾವಾರು ಕಾಳಗ ನಡೆದಿದ್ದು ಇದರಿಂದ ತೀವ್ರವಾಗಿ ಇರಿತಕ್ಕೆ ಒಳಗಾದ ಬಶೀರ್ ಆಸ್ಪತ್ರೆಗೆ ದಾಖಾಲಾಗಿದ್ದಾರೆ ಎಂದು ವರದಿಯನ್ನು ಬಿತ್ತರಿಸುವ ಮೂಲಕ ಪಬ್ಲಿಕ್ ಟಿವಿ ಸಾರ್ವಜನಿಕರಿಂದ ಧಿಕ್ಕಾರ ಕೂಗಿಸಿಕೊಂಡಿದೆ.

ಸಾರ್ವಜನಿಕರಿಂದ ಛೀಮಾರಿ

ಬಶೀರ್ ಸಾವಿನ ಕುರಿತು ಸುಳ್ಳು ವರದಿಯನ್ನು ಪ್ರಕಟಗೊಳಿಸಿದ ಪಬ್ಲಿಕ್ ಟಿವಿಯ ವರದಿಗಾರರು ಮೃತ ಬಶೀರ್ ವರದಿ ಮಾಡಲು ಬಂದ ಸಂದರ್ಭದಲ್ಲಿ ‌ಅಲ್ಲಿ‌‌ ನೆರೆದಿದ್ದ‌ ಜನರು ಪಬ್ಲಿಕ್ ಟಿವಿ ವರದಿಗಾರರಿಗೆ‌ ಛೀಮಾರಿ ಹಾಕುವ ಮೂಲಕ ಹಿಂದೆ ಕಳುಹಿಸಿದ ಘಟನೆ ನಡೆದಿದೆ.‌ ಇದಾದ ಬಳಿಕವೂ ಪಬ್ಲಿಕ್ ಟಿವಿಯವರು ತಾವು ಮಾಡಿದ ತಪ್ಪಿಗೆ ಕ್ಷೆಮೆ ಕೇಳದಿರುವುದರ ಬಗ್ಗೆ ಫೇಸ್‌ಬುಕ್‌ ಮುಖಾಂತರ ಜನರು ಬಾರಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಾನನಷ್ಟ ಮೊಕದ್ದಮೆಗೆ ಆಗ್ರಹ

ಇನ್ನೂ ಬಶೀರ್ ಸಾವಿನ ಕುರಿತಾಗಿ ಇಲ್ಲಸಲ್ಲದ ಕತೆಗಳನ್ನು ಕಟ್ಟಿ ಜನರ ದಿಕ್ಕನ್ನು ತಪ್ಪಿಸಿ ಜನರಲ್ಲಿ ಕೋಮುದ್ವೇಷ ಭಾವನೆ ಉಂಟು ಮಾಡಿದ ವರದಿಯ ಬಗ್ಗೆ ಪಬ್ಲಿಕ್ ಟಿವಿ ಸ್ಪಷ್ಟನೆ ನೀಡಬೇಕು, ತಪ್ಪಿತಸ್ಥರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು ಎಂದು ಸಾಮಾಜಿಕ ಜಾಲತಾಣವಾದ ವಾಟ್ಸಾಪ್, ಫೇಸ್‌ಬುಕ್‌ ಮುಖಾಂತರ ಸಂದೇಶಗಳು ವೈರಲ್ ಆಗಿದೆ.

Leave a Reply