ತೊಂಬತ್ತರ ದಶಕದ ಮಕ್ಕಳು ಕಾರ್ಟೂನ್ ಧಾರಾವಾಹಿ ಜಂಗಲ್ ಬುಕ್ ಮೋಗ್ಲಿ ನೋಡದವರಿಲ್ಲ.

ಆ ಕಾರ್ಟೂನ್ ಶೋನಲ್ಲಿ ಶೇರ್ ಖಾನ್ ಎಂಬ ಹುಲಿಯಿತ್ತು. ಆ ಹುಲಿ ಬರುವುದೆಂದರೆ ಇಡೀ ಕಾಡಿನಲ್ಲಿ ತಲ್ಲಣ. ಅದರ ಶಬ್ದ ಕೇಳುವಾಗ ಎಲ್ಲಾ ಮಕ್ಕಳಲ್ಲೂ ಒಂದು ಆತಂಕ. ಆದರೆ ಆ ಶೇರ್ ಖಾನ್ ಹುಲಿಗೆ ಹಿನ್ನೆಲೆ ಧ್ವನಿ ನೀಡಿದ್ದು ಯಾರು ಗೊತ್ತೇ?

ಅವರೇ ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ನಾನಾ ಪಾಟೇಕರ್. ಇತ್ತೀಚೆಗೆ ಅವರು ತನ್ನ 66 ನೇ ಹುಟ್ಟುಹಬ್ಬವನ್ನು ಆಚರಿಸಿದಾಗ ಶೇರ್ ಖಾನ್ ಹುಲಿಯನ್ನು ನೆನಪಿಸಿಕೊಂಡರು.

Leave a Reply