ವಿಜಯಶ್ರೀ ಕೊಚ್ಚಿಯ ಕುಟ್ಟಿಚಾಲ್ ಮೂಲದವರು. ಅವರು ಬಾಲ್ಯದಿಂದಲೂ ತಾನು ವಕೀಲೆಯಾಗಬೇಕು ಎಂದು ಬಯಸಿದ್ದರು. ಆದರೆ ತನ್ನ 50 ನೇ ವಯಸ್ಸಿನವರೆಗೂ ಅವರು ಈ ಆಸೆಯನ್ನು ಕೈ ಬಿಡಲಿಲ್ಲ. ಈಗ ಅವರು ಕೇರಳ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪರೀಕ್ಷೆಯಲ್ಲಿ 3 ನೇ ಸ್ಥಾನ ಪಡೆದಿದ್ದಾರೆ. ಅವರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು.

ತಾಳ್ಮೆ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿಜಯಶ್ರೀ ಹೇಳುತ್ತಾರೆ. ಮೊದಲು ಅವರು ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಸ್ನಾತಕೋತ್ತರ ಪದವಿ ನಂತರ, ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಕಲಿಕೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.

ಕುಟುಂಬದ ಜವಾಬ್ದಾರಿ ಇದ್ದ ಕಾರಣ ಕಲಿಕೆ ಮುಂದುವರಿಸಲು ಅಂದು ಸಾಧ್ಯವಾಗಲಿಲ್ಲ. ಮದುವೆಯ ನಂತರ ಗಂಡನಿಗೆ ಸಹಾಯವಾಗಲೆಂದು ಕೆಲಸಕ್ಕೆ ಸೇರಿದೆ.

ಕೊನೆಗೂ ಅವರು ತನ್ನ ಕಲಿಕೆ ಮುಂದುವರೆಸಬೇಕು ಎಂಬ ದೊಡ್ಡ ನಿರ್ಧಾರ ತೆಗೆದುಕೊಂಡು ಎಲ್‌ಎಲ್‌ಬಿಯಲ್ಲಿ ಪ್ರವೇಶ ಪಡೆಯುತ್ತಾರೆ. ಅವರ ಗಂಡ ಈ ನಿರ್ಧಾರಕ್ಕೆ ಬೆಂಬಲ ಕೊಡುತ್ತಾರೆ. ತನ್ನ ಕೆಲಸದ ನಂತರ ತರಗತಿಗೆ ಅವರು ಹಾಜರಾಗುತ್ತಿದ್ದರು. ಪತಿ ಅವರಿಗಾಗಿ ಕಾದು ಬಳಿಕ ತರಗತಿ ಮುಗಿದ ಬಳಿಕ ಮನೆಗೆ ಕರೆದುಕೊಂಡು ಹೋಗುತ್ತಾರೆ.

Leave a Reply