ಜೈಪುರ : ಚಿಕಿತ್ಸೆ ಸರಿಯಾಗದಿದ್ದರೆ ಅಥವಾ ವೈದ್ಯರಿಂದ ಯಾವುದೇ ಎಡವಟ್ಟು ಸಂಭವಿಸಿದರೆ ರೋಗಿಯ ಕುಟುಂಬಿಕರು ವೈದ್ಯರ ಮೇಲೆ ಹಲ್ಲೆ ಮಾಡಿದ ಬಹಳಷ್ಟು ಘಟನೆಗಳನ್ನು ನೀವು ನೋಡಿರಬಹುದು. ಆದರೆ ಇಲ್ಲಿ ವೈದ್ಯರೇ ರೋಗಿಯೊಬ್ಬರ ಮೇಲೆ ಹಲ್ಲೆ ಮಾಡುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗೆ ಹಲ್ಲೆ ಮಾಡಿದ ಅಪಘಾತಕಾರಿ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ. ಫುಡ್ ಪಾಯಿಸನ್ ಚಿಕಿತ್ಸೆಗೆ ಭರ್ತಿಯಾಗಿದ್ದ ರೋಗಿ ವೈದ್ಯರೊಂದಿಗೆ ಹಿಂಸಾತ್ಮಕವಾಗಿ ವರ್ತಿಸಿದ್ದಕ್ಕೆ ವೈದ್ಯರು ಪ್ರತಿಯಾಗಿ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆ ಮಂಡಳಿ ಹೇಳಿದೆ. ವೀಡಿಯೋ ಬಿಡುಗಡೆಯಾದ ನಂತರ, ರಾಜಸ್ಥಾನ ಮಾನವ ಹಕ್ಕುಗಳ ಆಯೋಗ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಘಟನೆಯ ಬಗ್ಗೆ ಒಂದು ವರದಿಯನ್ನು ಕೇಳಿದೆ.

Leave a Reply