ನಾವು ಸೂಪರ್ ಹೀರೋಗಳನ್ನು ಸಿನೆಮಾ ಧಾರಾವಾಹಿಗಳಲ್ಲಿ ಮಾತ್ರ ಹೆಚ್ಚಾಗಿ ನೋಡುತ್ತಿರುತ್ತೇವೆ. ಆದರೆ ಕೆಲವೊಮ್ಮೆ ಸೂಪರ್ ಹೀರೋಗಳು ನಮಗೆ ನಿಮಗೆ ನಿಜ ಜೀವನದಲ್ಲೂ ಕಾಣ ಸಿಗುತ್ತಾರೆ. ಅಪಘಾತ ಮತ್ತು ಅಪಾಯಗಳ ಸಂದರ್ಭದಲ್ಲಿ ಅವರು ತಮ್ಮ ಜೀವವನ್ನು ಪಣಕ್ಕಿಟ್ಟು ಇತರರ ಜೀವನವನ್ನು ರಕ್ಷಿಸಲು ಧುಮುಕುತ್ತಾರೆ.

ಚೀನಾದ ಜುವಾಂಗ್ಸು ಪ್ರಾಂತ್ಯದಿಂದ ಚಾಂಚುಶಿನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. CCTVPlus.com ಪ್ರಕಾರ, ಬಾಲ್ಕನಿಯಲ್ಲಿ ನೇತಾಡುತ್ತಿದ್ದ ಮಗುವನ್ನು ಇಬ್ಬರು ಯುವಕರು ರಕ್ಷಿಸುವ ದೃಶ್ಯ ಅದರಲ್ಲಿ ಕಾಣಬಹುದು. 3 ವರ್ಷದ ಹೆಣ್ಣು ಮಗು ಕೊನೆಯಲ್ಲಿ ಮಲಗಿತ್ತು. ಮಗು ಎಚ್ಚರವಾದಾಗ, ಆಕೆ ಕಿಟಕಿಯನ್ನು ತೆರೆದು ಹೊರಗೆ ಹೋಗಿದ್ದಾಳೆ.

ಮಗುವಿನ ಹೆತ್ತವರು ಈ ಸೂಪರ್ ಹೀರೋಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಇಂತಹ ಅಪಾಯಕಾರಿ ಸಾಹಸಕ್ಕೆ ಇಳಿದು ನಮ್ಮ ಮಗುವನ್ನು ಕಾಪಾಡಿದದ್ದಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಮಗುವಿನ ತಂದೆ ಹೇಳಿದ್ದಾರೆ.

ವಿಡಿಯೋ ನೋಡಿ

Leave a Reply