ಇದು ನಮ್ಮ ಊರು: 6 ವರ್ಷಗಳ ಹಿಂದೆ ಸೊಸೆಯಾಗಿ ಮನೆಗೆ ಕರೆತಂದಿದ್ದ ಅದೇ ಹುಡುಗಿಯನ್ನು ಇದೀಗ ಮಗಳ ರೀತಿ ಮದುವೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ ಈ ಅತ್ತೆ. ಈ ವಿಶಿಷ್ಟ ಆದರ್ಶ ವಿವಾಹವು ಮಧ್ಯಪ್ರದೇಶದ ರತ್ಲಮ್ ನಲ್ಲಿ ನಡೆದಿದೆ. ಅತ್ತೆ -ಮಾವ ಇಬ್ಬರು ತಮ್ಮ ಕ್ಷೀಣಿಸುತ್ತಿರುವ ವಯಸ್ಸನ್ನು ಮನಗಂಡು ತಮ್ಮ ಸೊಸೆ ಇನ್ನು ವಿಧವೆಯಾಗಿ ಬದುಕು ಸವೆಸುವುದು ಬೇಡ ಎಂದು ತೀರ್ಮಾನಿಸಿ ಸೊಸೆಗೆ ಮರು ಮಾಡುವೆ ಮಾಡಲು ತೀರ್ಮಾನಿಸಿ ತಮ್ಮ ಸ್ವಂತ ಮಗಳನ್ನು ಮಾಡುವೆ ಮಾಡಿ ಕಳುಹಿಸುವ ಹಾಗೆ ಸೊಸೆಯನ್ನು ಮಾಡುವೆ ಮಾಡಿಸಿ ಕಳುಹಿಸಿದರು.

ರತ್ಲಮ್ ನ ಕಟ್ಜು ನಗರದ ನಿವಾಸಿ 65 ವರ್ಷದ ಸರ್ಲಾ ಜೈನ್ ಅವರ ಪುತ್ರ ಮೋಹಿತ್ ಜೈನ್ 6 ವರ್ಷಗಳ ಹಿಂದೆ ಸೋನಮ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ 3 ವರ್ಷಗಳ ನಂತರ ಮೋಹಿತ್ ಕ್ಯಾನ್ಸರ್ ಗೆ ತುತ್ತಾದರು. ಸೋನಮ್ ತನ್ನ ರೋಗಿ ಪತಿಯ ಸೇವೆ ಮಾಡಿದ್ದರು. ಆದರೂ ಮೋಹಿತ್ ಕೆಲವೇ ದಿನಗಳಲ್ಲಿ ಜೀವನದ ಯುದ್ಧವನ್ನು ಸೋತರು. ಮೋಹಿತ್ ಸಾವಿನ ನಂತರವೂ ಸೋನಮ್ ತನ್ನ ಅತ್ತೆ ಮಾವನ ಜೊತೆ ಮಗಳಂತೆ ಬದುಕಲು ಪ್ರಾರಂಭಿಸಿದರು. ಸೊಸೆ ಸೋನಂ ಅವರ ಸೇವೆಯನ್ನು ನೋಡಿ ಅವರ ಜೀವನದ ಸಂತೋಷದ ಬಗ್ಗೆ ಕಾಳಜಿ ವಹಿಸಿದ ಅತ್ತೆ ತಮ್ಮ ಸಹೋದರ ಲಲಿತ್ ಕಾಂಥೆಡ್ ಅವರ ಮಗ ಸೌರಭ್ ಜೈನ್ ನನ್ನು ಸೋನಮ್ ಅವರಿಗೆ ಮರು ಮದುವೆ ಮಾಡಿಸಲು ತೀರ್ಮಾನಿಸಿದರು. ಇದಕ್ಕಾಗಿ ಅವರ ಕುಟುಂಬದೊಂದಿಗೆ ಪುನರ್ವಿವಾಹಕ್ಕಾಗಿ ಮಾತನಾಡಿದಾಗ ಎಲ್ಲರೂ ಒಪ್ಪಿದರು.

LEAVE A REPLY

Please enter your comment!
Please enter your name here