ಕೇರಳ : ಕೇರಳದ ಇತಿಹಾಸದಲ್ಲೇ ಅತ್ಯಂತ ಭೀಕರ ಜಳಪ್ರಳಯ ಸಂಭವಿಸಿದ್ದು, ನೂರಾರು ಮಂದಿ ಬಲಿಯಾಗಿದ್ದು, ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಸರ್ಕಾರ, ಎನ್ಜಿಒಗಳು, ಸಂಘ ಸಂಸ್ಥೆಗಳು; ಎಲ್ಲರೂ ಕೇರಳದಲ್ಲಿ ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ತಮ್ಮ ತಮ್ಮ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಕೇರಳದ ಮುಖ್ಯ ಮಂತ್ರಿ ನೆರೆ ಪರಿಹಾರ ನಿಧಿಗೆ ದೇಶ ವಿದೇಶ ಗಳಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ. ಈ ಸಂದರ್ಭದಲ್ಲಿ ಯೋಧರು ಮತ್ತು ಮೀನುಗಾರರ ಸೇವೆಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ.

ಕೇರಳ ಭೀಕರ ಜಳಪ್ರಳಯದಲ್ಲಿ ಸಿಲುಕಿದ್ದ ಸುಮಾರು 17 ಸಾವಿರ ಮಂದಿಯನ್ನು ಭಾರತೀಯ ನೌಕಾ ಪಡೆ ರಕ್ಷಿಸಿದೆ ಎಂದು ನಾಕಾ ಪಡೆ ಅಡ್ಮಿರಲ್ ಸುನಿಲ್ ಲಂಬಾ ಹೇಳಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ ಸುಮಾರು 17,000 ಜನರನ್ನು ರಕ್ಷಿಸಲು ಸಾಧ್ಯವಾಯಿತು. ನಾವು ಈಗ ನಮ್ಮ ಕಾರ್ಯಾಚರಣೆಯನ್ನು ಬದಲಾಯಿಸಿದ್ದು, ಇನ್ನು ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತೇವೆ. ನೌಕಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಂದು ದಿನದ ವೇತನವನ್ನು ಸ್ವಯಂಪ್ರೇರಿತವಾಗಿ ದೇಣಿಗೆ ನೀಡಿದ್ದು, ನಾನು ಆ ಚೆಕ್ ಅನ್ನು ಕೇರಳ ಮುಖ್ಯಮಂತ್ರಿಗೆ ನೀಡುತ್ತೇನೆ ಎಂದು ನೌಕಾ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಹೇಳಿದರು.

ಇದೆ ಸಂದರ್ಭದಲ್ಲಿ ಅವರು ನೌಕಾಪಡೆ ಕ್ಷೇಮಾಭಿವೃದ್ಧಿ ಸಂಘದಿಂದ ನೀಡಿದ್ದ 25 ಲಕ್ಷ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನೂ ತನ್ನ ಕೇರಳ ಭೇಟಿಯ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

Leave a Reply