ಆರೋಗ್ಯಕರವಾದ ಆಹಾರ ಕ್ರಮವನ್ನು ಪಾಲಿಸುವ ವ್ಯಕ್ತಿಗೆ ಜೀವನ ಶೈಲಿಯಿಂದ ಬರುವ ರೋಗಗಳು ಬಾಧಿಸುವುದಿಲ್ಲ. ಆದ್ದರಿಂದ ಉತ್ತಮ ಆಹಾರ ಶೈಲಿಯನ್ನು ಅರಿತು ಅದರಂತೆ ಮಾಡಬೇಕಾದುದು ಆರೋಗ್ಯಕ್ಕೆ ಅತೀ ಅಗತ್ಯ. ಮಿತ ಆಹಾರ ಸೇವನೆ, ಸಾವಧಾನವಾಗಿ ಅಗಿದು ತಿನ್ನುವುದು, ತಿನ್ನುವ ಮೊದಲು ಮತ್ತು ಬಳಿಕ ಬಾಯಿ, ಮುಖ ಕೈಗಳನ್ನು ಚೆನ್ನಾಗಿ ತೊಳೆಯುವುದು. ಹೀಗೆ ಹಲವಾರು ಶಿಷ್ಟಾಚಾರ ಗಳನ್ನು ಪಾಲಿಸಬೇಕು. ಆಹಾರದಲ್ಲಿ ನಾವು ಗಮನವಿರಿಸಬೇಕಾದ ಕೆಲವು ವಿಷಯಗಳು:

ಸೇವಿಸುವ ಸಮಯ

ಆಹಾರವನ್ನು ಸಮಯ ನಿರ್ಧರಿಸಿ ತೆಗೆದುಕೊಳ್ಳುವುದು ಉತ್ತಮ. ಸಮಯ ತಪ್ಪಿದ ಆಹಾರ ಕ್ರಮವು ಶಾರೀರಿಕ ಹಾಗೂ ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಸೇವಿಸುವುದು. ಬೆಳಗಿನ ಉಪಹಾರವನ್ನು ಮಕ್ಕಳು ತಪ್ಪಿಸಿಕೊಳ್ಳಬಾರದು. ಅದು ಅವರ ಕಲಿಕೆ ಮತ್ತು ನೆನಪು ಶಕ್ತಿಯನ್ನು ಕಡಿಮೆಗೊಳಿಸು ತ್ತದೆ. ಒಂದು ದಿನ ಎಂಟರಿಂದ 12 ಗ್ಲಾಸ್ ನೀರು ಕುಡಿಯಬೇಕು. ಗಬಗಬನೆ ತಿನ್ನುವುದು ಮತ್ತು ಜಗಿಯದೆ ನುಂಗುವುದನ್ನು ಬಿಡಬೇಕು.

ಎಷ್ಟು ಸೇವಿಸಬಹುದು?

ಆಹಾರವು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಅವರ ಪ್ರಾಯ, ಎತ್ತರ, ತೂಕ, ಕೆಲಸ, ಶ್ರಮದಾಯಕ ಕೆಲಸ, ವ್ಯಾಯಾಮ ಹೀಗೆ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಎಷ್ಟು ಅಗತ್ಯವೆಂಬುದನ್ನು ತೀರ್ಮಾನಿಸಬೇಕು. ಆಹಾರದಲ್ಲಿ ನಾಲ್ಕರಲ್ಲೊಂದು ಭಾಗ ಧಾನ್ಯ (ಅನ್ನ, ಚಪಾತಿ, ರೊಟ್ಟಿ, ಇಡ್ಲಿ ಇತ್ಯಾದಿ) ಇನ್ನೊಂದು ಭಾಗ ಮಾಂಸ (ಮೀನು, ಮಾಂಸ, ಮೊಟ್ಟೆ ಇನ್ನಿರುವ ಅರ್ಧಭಾಗದಲ್ಲಿ ಹಸಿರು ಸೊಪ್ಪÅ ತರಕಾರಿಗಳು, ಹಣ್ಣು ಹಂಪಲುಗಳು, ಸೇರಿಕೊಂಡಿರಬೇಕು.

ತಯಾರಿಸಬೇಕಾದ ವಿಧಾನ

ಬೆಲೆಯೇರಿಕೆಯ ಇಂದಿನ ದಿನಗಳಲ್ಲಿ ಖರೀದಿಸಿ ತಂದ ಆಹಾರ ವಸ್ತುಗಳನ್ನು ಸರಿಯಾಗಿ ಅಡುಗೆ ತಯಾರಿಸದಿದ್ದರೆ ಅದರ ರುಚಿ ಮತ್ತು ಪೋಷಕಾಂಶವೂ ನಷ್ಟವಾಗುತ್ತದೆ. ಕೆಲವು ವಿಷಯವನ್ನು ಗಮನಿಸಿದರೆ ಅತ್ಯಂತ ರುಚಿಕರ ಹಾಗೂ ಪೋಷಕಾಂಶವಿರುವ ಆಹಾರ ತಯಾರಿಸಲು ಸಾಧ್ಯ. ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಧಾರಾಳವಾಗಿ ಸೇವಿಸಿ. ಸಾಧ್ಯವಾದಷ್ಟು ರಾಸಾಯನಿಕ ಉಪ ಯೋಗಿಸದೆ ಶುದ್ಧವಾದ ತರಕಾರಿಗಳಿಗೆ ಪ್ರಾಶಸ್ತ್ಯ ನೀಡಿ.

ಎಣ್ಣೆಯಲ್ಲಿ ಕರಿದದ್ದು ದೇಹಕ್ಕೆ ಒಳ್ಳೆಯದಲ್ಲ. ಆದ್ದರಿಂದ ಬೇಯಿಸಿದ ಆಹಾರಕ್ಕೆ ಗಮನ ನೀಡಿ ಅಗತ್ಯಕ್ಕೆ ತಕ್ಕಷ್ಟು ಅಡುಗೆ ಮಾಡಿ. ಏಕೆಂದರೆ ಬಾಕಿ ಉಳಿದರೆ ಅದನ್ನು ಪುನಃ ಬಿಸಿ ಮಾಡಿ ಸೇವಿಸುವುದರಿಂದ ಪೋಷಕಾಂಶ ನಷ್ಟವಾಗುತ್ತದೆ. (ಫ್ರಿಜ್ ಎಂಬ ಮಾಯಾಪೆಟ್ಟಿಗೆ ಬಂದ ಬಳಿಕ ಮಹಿಳೆಯರ ಅವಸ್ಥೆಯೇ ಹೀಗೆ ಅಲ್ಲವೇ?) ಉಪ್ಪು ಖಾರ, ಎಣ್ಣೆಯಂಶವನ್ನು ಸಾಧ್ಯವಾದಷ್ಟು ಕಡಿಮೆ ಗೊಳಿಸಿ. ಆದ್ದರಿಂದ ರಾಸಾಯನಿಕ ಸೇರಿಕೊಳ್ಳದ, ಹಿತ ಮಿತವಾಗಿ ಬೇಯಿಸಿದ, ಪೋಷಕಾಂಶ ಕಳೆದುಕೊಳ್ಳದ ಅಡುಗೆ ತಯಾರಿಸುವತ್ತ ಗಮನ ಹರಿಸಿ.

ಯಾವಾಗ ಸೇವಿಸಬೇಕು?

ಹಸಿವಾಗುವಾಗ ನಾವು ಆಹಾರ ಸೇವಿಸಬೇಕು ಟೈಂ ಟೇಬಲ್ ಇಟ್ಟು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಸಿವು ಆರಂಭವಾದ ಒಂದು ಗಂಟೆಯ ನಂತರ ಆಹಾರ ಸೇವಿಸುವುದು ಉತ್ತಮ. ದಹನ ರಸಗಳು ಆಗಲೇ ಆಹಾರವನ್ನು ಜೀರ್ಣಗೊಳಿಸಿ ಪೋಷಕಾಂಶಗಳನ್ನು ಪಡೆಯಲು ಸಿದ್ದವಾಗಿರುತ್ತದೆ.

ಹಸಿವಾಗದೆ ತಿನ್ನುವುದು ದಹನೇಂದ್ರಿಯವನ್ನು ತೊಂದರೆಗೊಳಪಡಿಸುತ್ತದೆ. ಶಾರೀರಿಕ ತೊಂದರೆ ಗಳು ಹೆಚ್ಚಲು ಕಾರಣವಾಗುತ್ತದೆ. ಪದೇ ಪದೇ ತಿನ್ನುತ್ತಲೇ ಇರುವುದು ಒಳ್ಳೆಯ ಅಭ್ಯಾಸವಲ್ಲ. ದಿನಕ್ಕೆ ಹೆಚ್ಚೆಂದರೆ ಮೂರು ಬಾರಿ ಆಹಾರ ಸೇವನೆಯ ಅಗತ್ಯವಿದೆ.
ತೌಡು ತೆಗೆಯದ ಅಕ್ಕಿಯನ್ನು ಆಯ್ದುಕೊಳ್ಳ ಬೇಕು. ಅದರಲ್ಲಿ ನಾರಿನಂಶ ಹೆಚ್ಚಿದೆ. ತುಂಬಾ ನೀರು ಹಾಕಿ ಅಕ್ಕಿ ಬೇಯಿಸುವುದರಿಂದ ಪೆÇೀಷ ಕಾಂಶಗಳು ನಷ್ಟವಾಗುತ್ತದೆ. ಇನ್ನು ಗಂಜಿ ನೀರನ್ನು ಉಪ್ಪು ಹಾಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹೊಟ್ಟೆ ತೊಳೆಸುವಿಕೆ, ಅತಿಸಾರ ಮೊದಲಾದ ಕಾಯಿಲೆಗಳಿಗೆ ಔಷಧಿಯೂ ಹೌದು. ತರಕಾರಿ ಬೇಯಿಸುವಾಗ ನೀರಿನ ಬದಲು ಗಂಜಿ ನೀರು ಉಪಯೋಗಿಸಬೇಕು.

ಯಾವುದೇ ಒಂದು ಆಹಾರ ಪದಾರ್ಥದ ಜೀವದ ಅವಧಿ ಒಂದು ನಿಶ್ಚಿತ ಸಮಯವಿರುತ್ತದೆ ಒಂದು ತರಕಾರಿಯಾದರೂ, ಹಣ್ಣು ಹಂಪ ಲಾದರೂ ಅದರ ಸಮಯ ಕಳೆದರೆ ಬಾಡಿ ಹೋಗುತ್ತದೆ. ಆದ್ದರಿಂದ ತಾಜಾ ಹಣ್ಣು ತರಕಾರಿ ಗಳನ್ನು ಖರೀದಿಸಿ ಉಪಯೋಗಿಸಬೇಕು. ಅದರಲ್ಲಿ ರುವ ಪೋಷಕಾಂಶ ನಷ್ಟವಾಗಲು ಬಿಡಬಾರದು.
ಹೊಟ್ಟೆ ಬಿರಿಯುವಂತೆ ಉಣ್ಣಬಾರದು. ಹೊಟ್ಟೆಯಲ್ಲಿ ಒಂದು ಭಾಗ ಆಹಾರ ಇನ್ನೊಂದು ಭಾಗ ನೀರು, ಇನ್ನೊಂದು ಭಾಗ ವಾಯುವಿಗೆ ಅವಕಾಶ ನೀಡಬೇಕು. ಸ್ವಲ್ಪ ಹಸಿದಿರುವಾಗಲೇ ಉಣ್ಣುವಲ್ಲಿಂದ ಏಳಬೇಕು.

Leave a Reply