ಇಂದಿನ ದಿನ ಮನುಷ್ಯ ಮೂರು ಹೊತ್ತು ಊಟ, ನಿದ್ದೆ ಬೇಕಾದರು ಬಿಟ್ಟು ಬದುಕಬಹುದು. ಆದರೆ ಫೇಸ್‌ಬುಕ್‌, ವಾಟ್ಸಾಪ್ ಇಲ್ಲಾಂದ್ರೆ ಬದುಕಲು ಸಾಧ್ಯವೇ ಇಲ್ಲ! ಎನ್ನುವ ಮಟ್ಟಕ್ಕೆ ತಲುಪಿ ನಿಂತಿದ್ದಾರೆ.

ನಿನ್ನೆ ಮಧ್ಯರಾತ್ರಿ ಇದೇ ಪ್ರಸಂಗವೊಂದು ನಡೆದಿದೆ. ರಾತ್ರಿ ಗಂಟೆ ಹನ್ನೆರಡು ಸಮೀಪಿಸುತ್ತಿದ್ದಂತೆ ವಾಟ್ಸಾಪ್ ಸಂಸ್ಥೆ ಹತ್ತರಿಂದ ಹದಿನೈದು ನಿಮಿಷದ ಕಾಲ ವಾಟ್ಸಾಪ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಹೊಸ ವರ್ಷದ ಶುಭಕೋರಲು ಹಾತೋರೆಯುತ್ತಿದ್ದ ಜನರು ಒಂದು ಕ್ಷಣ ಅಲ್ಲೋಲ ಕಲ್ಲೋಲ ಆದ್ರು. ಕೆಲ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಇಲ್ಲದ ಅನುಭವಗಳನ್ನು ತಮ್ಮ ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದರು.

ಒಟ್ಟಿನಲ್ಲಿ ವಾಟ್ಸಾಪ್-ಫೇಸ್‌ಬುಕ್‌ ನಂತಹ ಸಾಮಾಜಿಕ ಜಾಲತಾಣ‌ ಮನುಷ್ಯನ ಮೂರು ಹೊತ್ತಿನ ಆಹಾರಕ್ಕಿಂತಲೂ ಹೆಚ್ಚಾಗಿದೆ ಅನ್ನೋದು ಅಷ್ಟೇ ಸತ್ಯ!

Leave a Reply