ದುಬೈ : ಕೂಲ್ ಕ್ಯಾಪ್ಟನ್ ಎಂದು ಖ್ಯಾತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಹಾಟ್ ಆದ ಸುದ್ದಿ ವೈರಲ್ ಆಗಿದೆ. ಏಷ್ಯಾ ಕಪ್ ಕ್ರಿಕೆಟ್ ಪಂದ್ಯವೊಂದರಲ್ಲಿ ಅಫಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಕುಲದೀಪ್ ಯಾದವ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಫೀಲ್ಡಿಂಗ್ ಬದಲಾವಣೆ ಮಾಡಲು ಬಯಸಿದ್ದರು. ಆದರೆ ಧೋನಿ ಅದಕ್ಕೆ ಸಿದ್ಧರಿರಲಿಲ್ಲ. ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆ ಮಾಡದೇ ಬೌಲಿಂಗ್ ಮಾಡಲು ಮುಂದಾಗದೆ ಇದ್ದಾಗ ಧೋನಿ ಗರಂ ಆಗಿದ್ದಾರೆ.

ಬೌಲಿಂಗ್ ಕರೇಗಾ ಯಾ ಬೌಲರ್ ಚೇಂಜ್ ಕರೂನ್ ಕ್ಯಾ – ಬೌಲಿಂಗ್ ಮಾಡುವೆಯಾ ಇಲ್ಲವೇ ಬೌಲರ್ ಬದಲಾವಣೆ ಮಾಡಬೇಕೇ ಎಂದು ಕೋಪಿಸಿಕೊಂಡಿದ್ದಾರೆ. ಧೋನಿಯವರ ಈ ವರ್ತನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇದು ಧೋನಿಯವರ ೨೦೦ ನೇ ವನ್ ಡೇ ಕ್ರಿಕೆಟ್ ನಾಯಕತ್ವ ವಹಿಸಿದ ಪಂದ್ಯ ಆಗಿತ್ತು. ಈ ಪಂದ್ಯ ಟೈ ಆಗಿ ರೋಚಕ ಅಂತ್ಯ ಕಂಡಿತ್ತು. ಭಾರತ ತಂಡದ ನಾಯಕ ರೋಹಿತ್ ಶರ್ಮ ವಿಶ್ರಾಂತಿ ಪಡೆದಿದ್ದರಿಂದ ಧೋನಿ ತಂಡವನ್ನು ಮುನ್ನಡೆಸಿದ್ದರು.

Leave a Reply