ಹೊಸದಿಲ್ಲಿ: ಪಾಕಿಸ್ತಾನದ ಮಾಜಿ ನಾಯಕ ಸಿಡಿಗುಂಡಿನ ಬ್ಯಾಟಿಂಗ್ ತಾರೆ ಉಪಯುಕ್ತ ಸ್ಪಿನ್ನರ್ ಶಾಹಿದ್ ಅಫ್ರಿದ್‍ಗೆ ಬೂಂಬೂಂ ಆಫ್ರಿದಿಎಂದು ಹೆಸರಿರಿಸಿದ್ದು ಭಾರತದ ಮಾಜಿ ನಾಯಕ ಹಾಗೂ ಸದ್ಯ ಟೀಂ ಇಂಡಿಯದ ತರಬೇತುದಾರನಾಗಿರುವ ರವಿಶಾಸ್ತ್ರಿ ಆಗಿದ್ದಾರೆ. ಈ ವಿಚಾರವನ್ನುಆಫ್ರಿದಿಯವರೆಬಹಿರಂಗಗೊಳಿಸಿದ್ದಾರೆ. ಅಭಿಮಾನಿಗಳ ಜೊತೆ ಟ್ವಿಟರ್‍ನಲ್ಲಿ ಸಂವಾದ ನಡೆಸುವಾಗ ಆಫ್ರಿದಿ ಈವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಅಭಿಮಾನಿ ಆಫ್ರಿದಿಯವರನ್ನು ನಿಮಗೆ ಬೂಂ ಬೂಂ ಎಂದು ಯಾರು ಹೆಸರಿಟ್ಟಿದ್ದಾರೆ ಎಂದು ಕೇಳಿದಾಗ ಅದೊಂದು ಬಿರುದು ಆಗಿದೆ. ಎಂದು ಆಫ್ರಿದಿ ಹೇಳಿದರು. ನಂತರ ಭಾರತದ ಕ್ರಿಕೆಟ್ ಲೆಜೆಂಡ್ ರವಿಶಾಸ್ತ್ರಿ ಈ ಹೆಸರಿನ್ನಿರಿಸಿದ್ದಾರೆ ಎಂದು ಆಫ್ರಿದಿ ತಿಳಿಸಿದರು. 398 ಏಕದಿನಗಗಳಿಂದ 335 ಸಿಕ್ಸರ್ ಮತ್ತು 99 ಟಿ ಟ್ವಂಟಿ ಪಂದ್ಯದಲ್ಲಿ 73ಸಿಕ್ಸರ್‍ಗಳನ್ನು ಆಫ್ರಿದಿ ಹೊಡೆದಿದ್ದಾರೆ. ಈ ಸಿಕ್ಸರ್‍ಗಿರಿ ಆಫ್ರಿದಿಗೆ ಅಂತಹದೊಂದು ಹೆಸರನ್ನು ತಂದು ಕೊಟ್ಟಿದೆ.

ಬೂಂಬೂಂ ಆಫ್ರಿದಿ ಎಂದು ಅವರು ಜನಪ್ರಿಯರಾಗಿದ್ದು, ಅಭಿಮಾನಿಗಳು ಕೂಡ ಬೂಂ ಬೂಂ ಆಪ್ರಿದಿಯೆಂದೇ ಅವರು ಅಂಗಣದಲ್ಲಿ ಆಟವಾಡುವಾಗುವಾಗ ಕೂಗುತ್ತಿದ್ದರು. ಅಫ್ರಿದಿಗೆ ಅವರ ಸಿಕ್ಸರ್‍ಗಳು ಬೂಂಬೂಂ ಹೆಸರನ್ನು ತಂದು ಕೊಟ್ಟಿದೆ. ಅಫ್ರಿದಿ ಕ್ರೀಸಿಗೆ ಅಂಟಿದರೆ ಎದುರುತಂಡಕ್ಕೆ ತಲೆನೋವಾಗಿಬಿಡುತ್ತಿತ್ತು. ಸ್ಪಿನ್ ಬೌಲಿಂಗ್‍ನಲ್ಲಿಯೂ ಆಫ್ರಿದಿ ಖ್ಯಾತಿ ಗಳಿಸಿದ್ದು, ಈಗ ಅವರು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತರಾಗಿದ್ದಾರೆ.

Leave a Reply