ಅತ್ಯಾಚಾರದಿಂದ ರಕ್ಷಣೆ ಹೊಂದಲು ತನಗೆ ಏಡ್ಸ್ ಇದೆ ಎಂದು ವಿಧವೆ ಮಹಿಳೆಯೊಬ್ಬಳು ಹೇಳಿದ ಘಟನೆ ವರದಿಯಾಗಿದೆ. ಔರಂಗಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಜಾಮೀನಿನ ಮೇರೆಗೆ ಹೊರಗೆ ಬಂದ ಕೊಲೆ ಆರೋಪಿಯೊಬ್ಬ ವಿಧವೆ ಮಹಿಳೆಯನ್ನು ರೇಪ್ ಮಾಡಲು ಪ್ರಯತ್ನಿಸಿದ್ದಾನೆ.
ಈ ವೇಳೆ ಮಹಿಳೆ ತಾನು ಏಡ್ಸ್ ರೋಗಿ ಎಂದು ಹೇಳಿದ್ದು, ಇದನ್ನು ಕೇಳಿದ ಅತ್ಯಾಚಾರಿ ಆಕೆಯನ್ನು ಬಿಟ್ಟು ಹೊರಗೆ ಓಡಿದ್ದಾನೆ. ಆಕೆಯ ತಂದೆಯನ್ನು ಕೊಂದದ್ದಕ್ಕಾಗಿ ಆತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಬಳಿಕ ಆತನನ್ನು ಬಂಧಿಸಲಾಗಿತ್ತು…

ನಮ್ಮ ದೇಶದಲ್ಲಿ ಕಳೆದ ವರ್ಷ ಅಂದರೆ 2015ರಲ್ಲಿ ಒಟ್ಟು 34,600 ಪ್ರಕರಣಗಳು ದಾಖಲಾಗಿತ್ತು. ಮಧ್ಯ ಪ್ರದೇಶ ಹಾಗೂ ದೆಹಲಿಯಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ದಳ(ಎನ್’ಸಿ’ಆರ್’ಬಿ) ಮಾಹಿತಿ ಬಿಡುಗಡೆ ಮಾಡಿತ್ತು.
34,651 ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾದ 33,098 ಮಹಿಳೆಯರಿಗೆ ಅಫರಾಧಿ ಯಾರೆಂದು ತಿಳಿದಿದೆ.ಪ್ರಕರಣಗಳು 6 ವರ್ಷ ಬಾಲಕಿಯರಿಂದ 60 ವರ್ಷದ ವೃದ್ಧೆಯರವೆರೆಗೂ ನಡೆದಿವೆ.

Leave a Reply