ಭೋಪಾಲ್ : ಮದುವೆಯಾಗುವಾಗ ನೂರಾರು ಕನಸುಗಳು ಅಭಿಲಾಷೆಗಳು ಎಲ್ಲವೂ ಇರುತ್ತದೆ. ಆದರೆ ಮೊದಲ ರಾತ್ರಿಯೇ ಪತ್ನಿ ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ಗಂಡನಾದವನಿಗೆ ಏನಾಗ ಬೇಡ. ಆದರೆ ಮಧ್ಯ ಪ್ರದೇಶದ ಈ ಪತಿ ಇದೀಗ ತನ್ನ ಮದುವೆಯನ್ನು ತ್ಯಾಗ ಮಾಡಿ ಪ್ರೇಮಿಗಳನ್ನು ಒಂದು ಮಾಡಲು ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಯುವತಿ ಮತ್ತು ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯವರು ಇವರ ವಿವಾಹಕ್ಕೆ ಅಡ್ಡಿ ಆಗಿದ್ದರು. ಒಂದು ವೇಳೆ ವಿವಾಹ ಮುರಿದರೆ ಸಾಯುವುದಾಗಿ ಹೆತ್ತವರು ಬೆದರಿಕೆ ಹಾಕಿದ್ದರು. ಆದರೆ ಮದುವೆಯ ಮೊದಲ ರಾತ್ರಿಯೇ ಆಕೆ ತನ್ನ ಪ್ರೇಮದ ವಿಷಯವನ್ನು ಗಂಡನಿಗೆ ಮುಚ್ಚು ಮರೆಯಿಲ್ಲದೆ ಹೇಳಿದ್ದಾಳೆ.

ಭೋಪಾಲ್ ಫ್ಯಾಮಿಲಿ ಕೋರ್ಟ್ ಗೆ ಹೋಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿ  ತಾನು ಮದುವೆಯಾದ ಯುವತಿಯ ಪ್ರಿಯಕರನನ್ನು ಭೇಟಿಯಾಗಿದ್ದಾರೆ. ಯುವತಿ ಮತ್ತು ಪ್ರಿಯಕರ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ಮದುವೆಯನ್ನು ನಿರಾಕರಿಸಿದ್ದರು. ಸರ್ಕಾರಿ ಉದ್ಯೋಗದಲ್ಲಿದ್ದರೆ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂದು ನಮ್ಮ ತಂದೆ ಭಾವಿಸಿದ್ದರು ಎಂದು ಯುವತಿ ಹೇಳಿದ್ದಾಳೆ.

ಇಬ್ಬರೂ ಸ್ವಂತ ನಿರ್ಧಾರ ತೆಗೆಯಲು ಅರ್ಹರಾಗಿದ್ದು, ಉದ್ಯೋಗಸ್ಥರಾಗಿದ್ದಾರೆ ಕೂಡ. ಈ ನಿಟ್ಟಿನಲ್ಲಿ ಇಬ್ಬರೂ ತಮ್ಮಿಷ್ಟದಂತೆ ದೂರವಾಗಲು ನಿರ್ಧಾರ ಮಾಡಿರುವುದರಿಂದ ಪತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಶಿಫಾರಸು ಮಾಡಿದೆ.

LEAVE A REPLY

Please enter your comment!
Please enter your name here