ಪತಿಯನ್ನು ಕೊಂದು ಆತನ ರುಂಡದೊಂದಿಗೆ ಪತ್ನಿಯೊಬ್ಬಳು ಪೊಲೀಸ್ ಠಾಣೆಗೆ ಹಾಜರಾದ ಘಟನೆ ಅಸ್ಸಾಂನಿಂದ ವರದಿಯಾಗಿದೆ. ಮಂಗಳವಾರ ಅಸ್ಸಾಮಿನ ಲಖೀಮ್ ಪುರದಲ್ಲಿ ಈ ಘಟನೆ ನಡೆದಿದ್ದು, ಪತಿಯ ಹತ್ಯೆಯ ಬಳಿಕ ಖುದ್ದು ಮಹಿಳೆ ರುಂಡದೊಂದಿಗೆ ಪೋಲಿಸ್ ಠಾಣೆಗೆ ತೆರಳಿದಳು.
ನನ್ನ ಪತಿ ನನಗೆ ತುಂಬಾ ಹಿಂಸೆ ಕೊಡುತ್ತಿದ್ದ. ಮಾರಣಾಂತಿಕ ವಾಗಿ ಹಲ್ಲೆ ಮಾಡುತ್ತಿದ್ದ. ಒಂದು ವೇಳೆ ನಾವು ಆತನನ್ನು ಕೊಲ್ಲದೇ ಇರುತ್ತಿದ್ದರೆ ಅವನು ನನ್ನ ಹತ್ಯೆ ಮಾಡುತ್ತಿದ್ದ. ಆದ್ದರಿಂದ ನಾನೇ ಆತನ ಹತ್ಯೆ ಮಾಡಿದೆ ಎಂದು ಮಹಿಳೆ ಪೊಲೀಸರೊಂದಿಗೆ ಹೇಳಿದ್ದಾಳೆ.
ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Leave a Reply