ಕೆಲ ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಮನಸ್ಸಿಗೆ ಬಹಳ ನೋವು ತರಿಸಿದೆ.‌ ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಇರೋಣ, ನಮಗೆ ಶಾಂತಿ ಬೇಕು. ಹಿಂಸಾಚಾರ ಬೇಡ.‌ ನಮ್ಮನ್ನು ದೂರ‌ ಮಾಡಲು ಬರುವವರ ಜೊತೆ ನಾವು ಸೇರೋದು ಬೇಡ. ಶಾಂತಿ ಕದಡುವವರ ಮೇಲೆ ಒಗ್ಗೂಡಿ ಯಾವ ರೀತಿ ಎದುರಿಸಬೇಕೆಂಬೆಂಬುದನ್ನು ತಿಳಿಯಬೇಕು ಎಂದು ತಮ್ಮ ಹೊಸ ಚಿತ್ರ ‘ಡಿಕ್ಟೇಟರ್’ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಹುಚ್ಚಾ ವೆಂಕಟ್ ಮಂಗಳೂರಿನಲ್ಲಿ ಹೇಳಿದರು.

ಇದೇ ವೇಳೆಯಲ್ಲಿ ಮಾತಾಡಿದ ಅವರು ನಾನು ಅರವತ್ತರ ವಯಸ್ಸಿನಲ್ಲಿ ದೇಶದ ಪ್ರಧಾನಿ ಆಗಲಿದ್ದೇನೆ.‌ ಆ ಸಮಯದಲ್ಲಿ ಹೊಸ ರಾಜಕೀಯ ಪಕ್ಷ ಒಂದನ್ನು ಕಟ್ಟಲಿದ್ದೇನೆ. ಈಗ ನನ್ನ ತಂದೆಯವರು ನಿರಾಕರಿಸುತ್ತಿದ್ದಾರೆ ಎಂದರು.

ಚುನಾವಣೆಯಲ್ಲಿ ನಕಲಿ ಮತ ಹಾಕದಂತೆ ತಡೆಯಬೇಕು, ಸೀರೆ, ಹಣಕ್ಕಾಗಿ ನಮ್ಮನ್ನು ನಾವು ಮಾಡಿಕೊಳ್ಳವಾರದು ಎಂದು ಜನರಿಗೆ ಉಪದೇಶ ನೀಡಿದರು. ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಐಶ್ವರ್ಯ ಜೊತೆಗಿದ್ದರು.

Leave a Reply