ಮುಂಬೈ: ವಿಮಾನದಲ್ಲಿ ಮಹಿಳೆಯೊಬ್ಬರು ಹೆತ್ತ ಘಟನೆ ನಡೆದಿದೆ. ವಿಮಾನ ಅಬುಧಾಬಿಯಿಂದ ಜಕಾರ್ತಕ್ಕೆ ಹೊರಟಿತ್ತು. ಈ ವೇಳೆ ವಿಮಾನದಲ್ಲಿ ಇಂಡೊನೇಶ್ಯದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಹೆರಿಗೆಯಾಗಿದೆ. ಘಟನೆ ಅಬುಧಾಬಿಯಿಂದ ಜಕಾರ್ತಕ್ಕೆ ಹೊರಟಿದ್ದ ಇತ್ತಿಹಾದ್ ಏರ್‍ವೇಸ್ ವಿಮಾನದಲ್ಲಿ ನಡೆದಿದ್ದು ಮಹಿಳೆಗೆ ಹೆರಿಗೆಯಾದ ಕಾರಣದಿಂದ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವಿಮಾನವನ್ನು ಮುಂಬೈ ಛತ್ರಪತಿ ಶಿವಾಜಿ ವಿಮಾನದಲ್ಲಿ ತುರ್ತುಭೂಸ್ಪರ್ಶ ಮಾಡಲಾಗಿದೆ.

ಮಹಿಳೆಗೆ ತುರ್ತು ಚಿಕಿತ್ಸೆ ನೀಡುವ ಅಗತ್ಯವಿದ್ದುದರಿಂದ ಕೂಡಲೇ ವಿಮಾನವನ್ನು ಮುಂಬೈಯಲ್ಲಿ ಇಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದು,ಕೂಡಲೇ
ವಿಮಾನವನ್ನು ಮುಂಬೈಗೆ ತಿರುಗಿಸಿ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಿನ್ನೆ ನಡೆದಿದ್ದು ಮಹಿಳೆಯನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಮತ್ತು ಮಗು ಆರೋಗ್ಯದಿಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.ನಂತರ ಎರಡು ಗಂಟೆ ತಡವಾಗಿ ವಿಮಾನ ಪ್ರಯಾಣ ಮುಂದುವರಿಸಿತ್ತು.

Leave a Reply