photo credit ; pearvideo

ನಿರಂತರ ಒಂದು ವಾರಗಳ ಕಾಲ ಮೊಬೈಲು ಉಪಯೋಗಿಸಿದ ಯುವತಿಯು ತನ್ನ ಬೆರಳು ಸ್ಥಬ್ದವಾಗಿರುವುದರಿಂದ ಕಂಗಾಲಾಗಿದ್ದಾಳೆ. ಒಂದು ವಾರಗಳ ರಜೆ ದೊರೆತಾಗ ರಜಾ ದಿನಗಳಲ್ಲಿ ನಿರಂತರ ರಾತ್ರಿ ಮಲಗುವಾಗ ಹೊರತು ಪಡಿಸಿ ಉಪಯೋಗಿಸಿದಾಗ ಕೈ ಬೆರಳುಗಳಲ್ಲಿ ನೋವು ಪ್ರಾರಂಭವಾದುವು. ಬೆರಳುಗಳು ಅತ್ತಿತ ಚಲನೆಯಿಲ್ಲದೆ ಸ್ಥಬ್ದವಾಯಿತು.

ಆಸ್ಪತ್ರೆಗೆ ದಾಖಲಿಸಿದಾಗ ಅತಿಯಾದ ಮೊಬೈಲು ಬಳಕೆಯೇ ಕಾರಣವೆಂದು ವೈದ್ಯರು ತಿಳಿಸಿದರು, ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತ ಕಾರಣ ಬಳಿಕ ಗುಣಮುಖವಾಗಿ ಬೆರಳುಗಳು ಪೂರ್ವ ಸ್ಥಿತಿಯಂತೆ ಕಾರ್ಯಾಚರಿಸಿತು, ಆದರೆ ಮೊಬೈಲು ಫೋನ್ ಬಳಕೆ ನಿಲ್ಲಿಸಿ ಕೈಬೆರಳಿಗೆ ವಿಶ್ರಾಂತಿ ನೀಡಲು ಸೂಚಿಸಿದರು.

ಅತಿಯಾದ ಮೊಬೈಲು ಬಳಕೆ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ. ನಿದ್ರಾಹೀನತೆ, ದೃಷ್ಟಿಮಾಂದ್ಯ ರೋಗವು ಅತಿಯಾದ ಮೊಬೈಲ್ ಬಳಕೆಯಿಂದ ಬರುತ್ತದೆ. 20 ಗಂಟೆ ಮೊಬೈಲು ಬಳಕೆ ಮಾಡಿದ ಯುವತಿಗೆ ಪಾರ್ಶ್ವವಾಯು ರೋಗಕ್ಕೊಳಗಾದ ಘಟನೆಯೂ ಚೀನಾದಲ್ಲಿ ನಡೆದಿದೆ.

Leave a Reply