ಮಹಿಳೆಯರು ಪುರುಷರಿಗಿಂತ ಪ್ರಬಲರಾಗಿದ್ದಾರೆ ಮತ್ತು ಪುರುಷ ಕೌಂಟರ್ಪಾರ್ಟ್ಸ್ಗಿಂತ ಹೆಚ್ಚು ದಿನ ಬದುಕುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಮಹಿಳೆಯರು ದುರ್ಬಲರು ಎಂದು ಹೇಳುವ ವಾದಕ್ಕೆ ಈ ಸಂಶೋಧನೆ ಸವಾಲೊಡ್ಡುತ್ತದೆ.

ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚು ಕಾಲ ಜೀವಂತವಾಗಿರುತ್ತಾರೆ ಮಾತ್ರವಲ್ಲ, ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರ ಜೀವಂತ ಇರುವ ಸಂಭವನೀಯತೆ ಹೆಚ್ಚು. ಅವರಲ್ಲಿ ಅನುವಂಶೀಯವಾಗಿ ಸಾಂಕ್ರಾಮಿಕ ರೋಗಗಳಿಂದ ಪ್ರತಿರೋಧ ಮಾಡುವ ಹಾರ್ಮೋನ್ ಇರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ.

ಅಮೆರಿಕದ ಡರ್ಹಾಮ್ನ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ವರ್ಜೀನಿಯಾ ಜರುಲಿ ನೇತೃತ್ವದಲ್ಲಿ ನಡೆದ ಸಂಶೋಧನೆ ಈ ಅಂಶವನ್ನು ತಿಳಿಸುತ್ತದೆ.

Leave a Reply