ಗಾಂಧಿನಗರ: ಲಿಫ್ಟ್ ನಲ್ಲಿ ಮಕ್ಕಳು ಹೋಗುವಾಗ ಜಾಗ್ರತೆ ವಹಿಸಬೇಕು. ಯಾಕೆಂದರೆ ಲಿಫ್ಟ್ ನಲ್ಲಿ ಮಕ್ಕಳು ಸಿಕ್ಕಿ ಮೃತಪಟ್ಟ ಅದೆಷ್ಟೋ ಘಟನೆಗಳು ನಡೆದಿವೆ. ಆದರೆ ಲಿಫ್ಟ್ ದೊಡ್ಡವರಿಗೂ ಅಪಾಯಕಾರಿಯಾಕಿದೆ. ಗುಜರಾತಿನ ವಡೋದರಾದಲ್ಲಿ ಮಹಿಳೆಯೊಬ್ಬಳು ಲಿಫ್ಟ್ ಅವಘಡ ದಲ್ಲಿ ಮೃತ ಪಟ್ಟ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಮೂಲದ ಮಹಿಳೆಯೊಬ್ಬಳು ಲಿಫ್ಟ್ ಹತ್ತಿದಾಗ ಇಯರ್ ಫೋನ್ ಸಿಲುಕಿ ಆಕೆಯ ರುಂಡ ಹೊರಗೆ ಮತ್ತು ದೇಹ ಒಳಗೆ ಬಾಕಿಯಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ವಡೋದರದ ಪ್ಲಾಸ್ಟಿಕ್ ಉತ್ಪನ್ನ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುಶೀಲ ವಿಶ್ವಕರ್ಮ ಎಂಬ ಮಹಿಳೆ ಮೃತ ಪಟ್ಟ ದುರ್ದೈವಿ.

ಬೆಳಗ್ಗೆ ಕೆಲಸಕ್ಕೆ ಬಂದ ಮಹಿಳೆ ಮೂರನೇ ಮಹಡಿಗೆ ಹೋಗಲು ಲಿಫ್ಟ್ ಹತ್ತಿದ್ದು, ಆಗ ಆಕೆಯ ಬಳಿಯಿದ್ದ ಇಯರ್ ಫೋನ್ ಲಿಫ್ಟ್ ಗೆ ಸಿಲುಕಿ, ಅದು ಬಿಡಿಸುವ ಮುಂಚೆಯೇ ಲಿಫ್ಟ್ ಮೇಲೆ ಹೋಗಿದ್ದು, ಆಕೆಯ ರುಂಡ ಬೇರ್ಪಟ್ಟ ದುರಂತ ಸಂಭವಿಸಿದೆ. ಲಿಫ್ಟ್ ಗೆ ಮೇಲ್ಛಾವಣೆಯ ವ್ಯವಸ್ಥೆ ಮಾಡಿಸಿರಲಿಲ್ಲ. ಲಿಫ್ಟ್ ಹೊರಟಾಗ ಇಯರ್‌ಫೋನ್‌ ತೆಗೆಯಲು ಹೋಗಿ ಮಹಿಳೆಯ ತಲೆ ಕಬ್ಬಿಣದ ಸರಳಿನ ಬಾಗಿಲಿಗೆ ಸಿಕ್ಕಿ ತುಂಡಾಗಿ ನೆಲ ಮಹಡಿಗೆ ಬಿದ್ದರೆ, ಆಕೆಯ ದೇಹ ಲಿಫ್ಟ್ ಮೂಲಕ ಸಾಗಿ ಮೂರನೇ ಮಹಡಿ ತಲುಪಿತ್ತು. ಅಗ್ನಿಶಾಮಕ ದಳದ ಸಹಾಯ ಪಡೆದು ಮಹಿಳೆಯ ತಲೆ ಹಾಗೂ ದೇಹವನ್ನು ಹೊರತಗೆಯಲಾಯಿತು. ನಂತರ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮಹಿಳೆಯ ಶವವನ್ನು ಆಕೆಯ ಕುಟುಂಬಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

Leave a Reply