ಹೊಸದಿಲ್ಲಿ: ಮೀಟು ಅಭಿಯಾನ ತಪ್ಪಾದ ಸಂದೇಶವಾಗಿದೆ. ಎರಡ ಲಕ್ಷದಿಂದ ನಾಲ್ಕು ಲಕ್ಷ ರೂಪಾಯಿಯವರೆಗೆ ಹಣವನ್ನು ಪಡೆದುಕೊಂಡು ಪುರಷರ ವಿರುದ್ಧ ಮಹಿಳೆಯರು ಆರೋಪ ಹೊರಿಸುವುದು ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದರು.

ಹಣಕೈಗೆ ಸಿಕ್ಕಿದ ಬಳಿಕ ಆರೋಪ ಮಾಡುತ್ತಾರೆ. ಇದಾದ ಬಳಿಕ ಇನ್ನೊಬ್ಬನ ಮೇಲೆ ಆರೋಪಿಸುತ್ತಾರೆ. ಇದೊಂದು ಪುರುಷ ಗುಣವೆಂದು ನಾನು ಒಪ್ಪುವೆ.ಆದರೆ ಮಹಿಳೆಯರು ಪರಿಪೂರ್ಣತೆ ಹೊಂದಿದವರೇನು? ಇದನ್ನು ದುರುಪಯೋಗ ಮಾಡಲು ಸಾಧ್ಯವಿಲ್ಲವೆ?. ಇಂಥೆಲ್ಲ ಆರೋಪಗಳಿಂದ ಒಬ್ಬ ವ್ಯಕ್ತಿಯ ಜೀವನ ನಾಶವಾಗುತ್ತದೆ ಎಂದು ಉದಿತ್ ರಾಜ್ ಎಎನ್‍ಐಸುದ್ದಿ ಸಂಸ್ಥೆಗೆ ತಿಳಿಸಿದರು.

ಮೀಟೂ ಅಭಿಯಾನದ ಅಗತ್ಯವಿದೆ. ಹತ್ತು ವರ್ಷದ ಬಳಿಕ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದರ ಅರ್ಥವೇನು?. ಹಲವು ವರ್ಷಗಳ ಬಳಿಕ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೇಗೆ ಸಾಧ್ಯವಿದೆ. ಆರೋಪ ಹೊರಿಸಲಾದ ವ್ಯಕ್ತಿಯ ವರ್ಚಸ್ಸನ್ನು ನಾಶಪಡಿಸುವುದು ಇದರ ಮೂಲಕ ಗುರಿಯಿರಿಸಲಾಗುತ್ತಿದೆ ಎಂದು ಉದಿತ್ ರಾಜ್ ಹಿಂದಿಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

Leave a Reply