ಸಿಂಧುತಾಯಿ ಸಪ್ಕಲ್ ಸಾಮಾನ್ಯ ಮಹಿಳೆಯಲ್ಲ. 68 ವರ್ಷದ ಇವರ ಬದುಕು ಸ್ಪೂರ್ತಿದಾಯಕ ವಾಗಿದೆ. ಜೀವನದಲ್ಲಿ ಸ್ವತಃ ನೋವುಂಡರೂ ಇತರಿಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ಇವರ ಜೀವನಗಾಥೆ ಅದ್ಭುತವಾಗಿದೆ. ಅನಾಥ ಮಾತೆ ಎಂದು ಇವರನ್ನು ಎಲ್ಲರೂ ಕರೆಯುತ್ತಾರೆ.

ಒಬ್ಬರಿಗೆ ಯಾರೂ ಇಲ್ಲದಾಗ ಅವರಿಗಾಗಿ ನಾನಿರುತ್ತೇನೆ ಎಂದು ಹೇಳುವ ಇವರು ಬಹಳಷ್ಟು ಅನಾಥರ ಬದುಕನ್ನು ಬೆಳಗಿಸಿದ್ದಾರೆ.

ಅವರ ತಂದೆ ಶಿಕ್ಷಣ ಗಳಿಸಲು ಬೆಂಬಲಿಸಿದರೂ ಆಕೆ ತನ್ನ ಕುಟುಂಬದ ಜವಾಬ್ದಾರಿ ಮತ್ತು ಬೇಗ ಮಾಡುವೆ ಕಾರಣದಿಂದ ಅವರು ಹೆಚ್ಚು ಕಲಿಯಲು ಸಾಧ್ಯ ಆಗಲಿಲ್ಲ. ಕಲಿತದ್ದು ಕೇವಲ ನಾಲ್ಕು ತರಗತಿವರೆಗೆ ಮಾತ್ರ.

10 ವರ್ಷದ ನವ ವಯಸ್ಸಿನಲ್ಲಿ 30 ವರ್ಷ ವಯಸ್ಸಿನ ವ್ಯಕ್ತಿಯನ್ನು ಮದುವೆಯಾದರು. ಆದರೆ ಆ ದುಷ್ಟ ಪತಿ ಆಕೆಗೆ ದೈಹಿಕ ಹಿಂಸೆ ನೀಡಿದ್ದಲ್ಲದೆ ತುಂಬು ಗರ್ಭಿಣಿ ಆಗಿದ್ದ ಸಮಯದಲ್ಲಿ ಮನೆಯಿಂದ ಹೊರ ಹಾಕಿದರು. ಹಸುವಿನ ಹಟ್ಟಿಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿ ತನ್ನ ತಾಯಿ ಮನೆಗೆ ಹೋದಾಗ ಅಲ್ಲಿಯೂ ನಿರಾಸೆಯೇ ಕಾದಿತ್ತು.

ಹೊಟ್ಟೆಪಾಡಿಗಾಗಿ ಹೆಚ್ಚಿನ ಸಮಯವನ್ನು ಭಿಕ್ಷೆ ಬಿಡಲಿಕ್ಕೆ ತೊಡಗಿದರು. ಸಮಾಜದಲ್ಲಿ ಬಹಳಷ್ಟು ಮಕ್ಕಳು ಅನಾಥರಿದ್ದಾರೆ. ತಂದೆ ತಾಯಿಗಳನ್ನು ಕಳೆದ ಅನಾಥ ಮಕ್ಕಳು ಜೀವನಕ್ಕಾಗಿ ಪರದಾಡುತ್ತಿದ್ದಾರೆ ಎಂಬುದನ್ನು ಮನಗಂಡರು. ಒಬ್ಬೊಬ್ಬರನ್ನು ದತ್ತು ತೆಗಳು ಪ್ರಾರಂಭಿಸಿದರು. ಈಗ ದತ್ತು ತೆಗೆದವರನ್ನು ಸಾಕಬೇಕಲ್ಲವೇ.. ಭಿಕ್ಷೆ ಬೇಡುವುದನ್ನು ಹೆಚ್ಚಿಸಿಕೊಂಡರು. ದಿನವಿಡೀ ಭಿಕ್ಷೆ ಬೇಡಿ ಮಕ್ಕಳಿಗೆ ಉಣಬಡಿಸಿದರು. ಹೀಗೆ ಕಂಡ ಕಂಡ ಅನಾಥ ಮಕ್ಕಳನ್ನೆಲ್ಲ ಮನೆಗೆ ಕರೆದು ಕೊಂಡು ಬಂದು ಅವರನ್ನು ಸಾಕಲು ತೊಡಗಿದರು. ಕೆಲವೇ ಸಮಯದಲ್ಲಿ ಅವರು ಅನಾಥರ ಮಾತೆಯಾದರು

ಈ ತನಕ ಅವರು 1,400 ಅನಾಥರನ್ನು ಪೋಷಿಸಿ ಅವರಿಗೆ ಶಿಕ್ಷಣ ನೀಡಿ ಸ್ವಂತ ಕಾಲಲ್ಲಿ ನಿಲ್ಲುವಂತೆ ಮಾಡಿದರು.ಎಲ್ಲರೂ ಅವರನ್ನು “ಮಾಯ್” (ತಾಯಿ) ಎಂದು ಪ್ರೀತಿಯಿಂದ ಕರೆಯುತ್ತಾರೆ. ಆ ಅನಾಥ ಮಕ್ಕಳಲ್ಲಿ ಕೆಲವರು ಡಾಕ್ಟರ್, ವಕೀಲರು ಇಂಜಿನೀರ್ ಇದ್ದಾರೆ.

ಸಿಂಧುತೈ ಅವರ ಪ್ರೀತಿ ಮತ್ತು ಸಹಾನುಭೂತಿಯೊಂದಿಗೆ ಈಗ 1000 ಮೊಮ್ಮಕ್ಕಳ ಕುಟುಂಬದ ದೊಡ್ಡ ಕುಟುಂಬವನ್ನು ಹೊಂದಿದ್ದಾರೆ. ಈಗಲೂ ಅವರ ಬಗ್ಗೆ ಆಕೆ ಚಿಂತಿಸುತ್ತಾರೆ. ಅವರ ಬದುಕು ಹಲವಾರು ಮಂದಿಗೆ ಸ್ಪೂರ್ತಿ ಆಗಿದೆ ಮತ್ತು ಅವರ ಬದುಕಿನ ಮರಾಠಿ ಸಿನೆಮಾ ಆಗಿದೆ. ಬಡವರಿಗಾಗಿ ಅವರು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರಿಗೆ ಸುಮಾರು ೫೦೦ ಪ್ರಶಸ್ತಿಗಳು ದೊರಕಿದೆ.

Leave a Reply