ನಮ್ಮ ಹೊಟ್ಟೆ ನಾವು ತಿನ್ನುವ ಆಹಾರವನ್ನೆಲ್ಲ ಸಂಗ್ರಹಿಸುವ ಹಿಗ್ಗುವ ಚೀಲದಂತಿದೆ. ಗ್ರಾಸ್ಟ್ರಿಕ್ ರಸ ಮತ್ತು ಹುಳಿ ದ್ರವದಂತ ಅಂಶಗಳನ್ನು ನಮ್ಮ ಜಠರವು ಉತ್ಪಾದಿಸುತ್ತದೆ. ಇದು ಹೊಟ್ಟೆಯಲ್ಲಿರುವ ಆಹಾರವನ್ನು ಸಣ್ಣ ಸಣ್ಣ ತುಂಡುಗಳ ರೂಪದಲ್ಲಿ ವಿಂಗಡಿಸಲು ಸಹಾಯ ಮಾಡುತ್ತದೆ. ನಮ್ಮ ಹೊಟ್ಟೆಯಲ್ಲಿರುವ ಶಕ್ತಿಶಾಲಿ ಸ್ನಾಯುಗಳು ಆಹಾರವನ್ನು ಹಿಂಡಿ, ಕರಗಿಸಿ ಮೆತ್ತಗಿನ ದ್ರಾವಣದ ರೂಪಕ್ಕೆ ಮಾರ್ಪಡಿಸುತ್ತವೆ. ನಂತರ ಆ ಆಹಾರವು ಸಣ್ಣ ಕರುಳಿಗೆ ಕಳುಹಿಸಲ್ಪಡುತ್ತದೆ. ಈ ಕ್ರಿಯೆಯನ್ನು ಜೀರ್ಣಕ್ರಿಯೆ ಎನ್ನುತ್ತಾರೆ.

Leave a Reply