
ಹೊಸದಿಲ್ಲಿ: 9000 ಕೋಟಿ ರೂಪಾಯಿ ಸಾಲ ಮರುಪಾವತಿಸದೆ ದೇಶ ತೊರೆಯಲು ವಿಜಯಮಲ್ಯರಿಗೆ ಸಿಬಿಐ ಸಹಾಯ ಮಾಡಿದೆ ಎಂಬ ಆರೋಪ ಮಾಧ್ಯಮಗಲ್ಲಿ ಚರ್ಚೆ ಆಗುತ್ತಿದೆ. ಮಲ್ಯರನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯ ಬೇಕಿಲ್ಲ ಎಂದು ಮುಂಬೈ ಪೊಲೀಸರಿಗೆ ಸಿಬಿಐ ಬರೆದಿದ್ದ ಪತ್ರದ ವಿವರಗಳು ಬಹಿರಂಗವಾಗಿದೆ. ಇದರೊಂದಿಗೆ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಆರೋಪವನ್ನು ತೀವ್ರಗೊಳಿಸಿದೆ. ಇತರ ಪ್ರತಿಪಕ್ಷಗಳು ಧ್ವನಿಗೂಡಿಸಿವೆ.
ವಿಜಯ್ ಮಲ್ಯರನ್ನು ವಿಮಾನ ನಿಲ್ದಾಣದಲ್ಲಿ ತಡೆಯಬೇಕು ಎನ್ನುವ ಲುಕ್ಔಟ್ ನೋಟಿಸು 2016ರ ಅಕ್ಟೋಬರ್ನಲಿ ಸಿಬಿಐ ಹೊರಡಿಸಿತ್ತು. ನಂತರ ನೋಟಿಸನ್ನು ನವೆಂಬರ್ 24ರಂದು ಇದನ್ನು ಹಿಂಪಡೆದು ಮಲ್ಯರನ್ನು ತಡೆಹಿಡಿಯಬೇಕಿಲ್ಲ ಎಂದು ನೋಟಿಸು ಜಾರಿಗೊಳಿಸಿತ್ತು. ಇದಕ್ಕೆ ಸಂಬಂಧಿಸಿದ ಸಂಶಯಾಸ್ಪದ ಚಟುವಟಿಕೆಗಳನ್ನು ಒಂದು ರಾಷ್ಟ್ರೀಯದಿನ ಪತ್ರ ಬಹಿರಂಗಪಡಿಸಿದೆ.
ಮಲ್ಯ ವಿದೇಶದಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬರಲಿದ್ದರೆ ಎಂದು 2016 ನವೆಂಬರ್ 23ಕ್ಕೆ ಎಮಿಗ್ರೇಶನ್ ವಿಭಾಗ ಸಿಬಿಐಗೆ ತಿಳಿಸಿತ್ತು. ಕೂಡಲೇ ಸಿಬಿಐ ಲುಕ್ಔಟ್ ನೋಟಿಸು ಹಿಂಪಡೆದಿತ್ತು. ನವೆಂಬರ್ 24ಕ್ಕೆ ಇದಕ್ಕೆ ಸಂಬಂಧಿಸಿದ ಸಂದೇಶವನ್ನು ಸಿಬಿಐ ರವಾನಿಸಿದೆ. ಮಲ್ಯರನ್ನು ಈಗ ತಡೆಯಬೇಕಿಲ್ಲ. ಕಸ್ಟಡಿಗೆ ಪಡೆಯಬೇಕಿಲ್ಲ ಮೊದಲಿನ ಲುಕ್ ಔಟ್ ನೋಟಿಸು ತಪ್ಪಾಗಿ ಹೊರಡಿಸಲಾಗಿದೆ ಎಂದು ಸಿಬಿಐ ಹೇಳಿತ್ತು.
1/2
Movie-Letting Mallya Escape.Producer & Director-Modi Govt.
Actor- Arun Jaitley, CBI.
Script-
1. Oct 16, 2015- CBI LOC to ‘Detain’.2. Nov 23,2015- Immigration informs about Mallya arrival on Nov 24 night.
3. Nov 24,2015- CBI LOC to ‘inform’ only.https://t.co/9V50MJ0KJj
— Randeep Singh Surjewala (@rssurjewala) September 18, 2018
ಈವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಪುನಃ ಆರೋಪ ಬಲಗೊಂಡಿದೆ. ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ತೀವ್ರ ವಾಗಿ ಕೇಂದ್ರ ಸರಕಾರವನ್ನು ಟೀಕಿಸಿದೆ. ಮಲ್ಯ ಪರಾರಿ ಎನ್ನುವ ಸಿನೆಮಾದಲ್ಲಿ ನರೇಂದ್ರ ಮೋದಿ ನಿರ್ದೇಶಕ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ನಟನಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.ದೇಶದಿಂದಪರಾರಿಯಾಗಲು ಭಾರತದ ಉನ್ನತ ರಾಜಕೀಯ ಹಸ್ತಕ್ಷೇಪ ನಡೆದಿತ್ತು ಎನ್ನುವ ವಿಚಾರ ತಮಗೂ ಮನವರಿಕೆಯಾಗಿತ್ತು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದರು.