ಹೊಸದಿಲ್ಲಿ: ಡಬ್ಲ್ಯೂಡಬ್ಲ್ಯೂ ಫ್ಯಾನ್ಸ್ ರೆಸ್ಲರ್ ದ ಅಂಡರ್ಟೇಕರ್‍ರ ಕೋಪ ಡಬ್ಲ್ಯೂ ಡಬ್ಲ್ಯೂ ಎಫ್ ನೋಡಿದವರಿಗೆ ಪರಿಚಯ ಇದ್ದೇ ಇರುತ್ತದೆ. ಇಂತಿರುವಾ ಗ ಇದೇ ಅಂಡರ್‍ಟೇಕರ್‍ರೊಂದಿಗೆ ಜಂಗೀ ಕುಸ್ತಿಗೆ ಭಾರತದ ಓರ್ವ ಮಹಾನ್ ಕುಸ್ತಿಪಟುಗೆ ಆಫರ್ ನೀಡಲಾಗಿತ್ತು. ಈ ಮಹಾನ್ ಕುಸ್ತಿಪಟು ಮಹಾಬಲಿ ಸತ್ಪಾಲ್ ಸಿಂಗ್. ಸತ್‍ಪಾಲ್ ಎರಡು ಬಾರಿ ಒಲಿಂಪಿಕ್‍ನಲ್ಲಿ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ಗುರು ಆಗಿದ್ದಾರೆ.

ಡಬ್ಲ್ಯೂಡಬ್ಲ್ಯೂ ಎಫ್‍ನಲ್ಲಿ ಪೆಟ್ಟು ತಿನ್ನುವುದಕ್ಕೆ ಹಣ ಇದೆ:

ಕೆಲವು ವರ್ಷದ ಹಿಂದೆಒಂದು ಸಂದರ್ಶನದ ವೇಳೆ ಸತ್ಪಾಲ್ ಸಿಂಗ್ ಹೀಗೆ ಹೇಳಿದ್ದರು. ಅಂಡರ್‍ಟೇಕರ್‍ರೊಂದಿಗೆ ಫೈಟ್ ಮಾಡುವ ಅವಕಾಶ ತನ್ನ ಮುಂದಿತ್ತು. ಡಬ್ಲ್ಯೂ ಡಬ್ಲ್ಯೂ ಎಫ್‍ನ ಜನರು ನನ್ನ ಬಳಿ ಬಂದಿದ್ದರು. ಭಾರತದ ಫೈಲ್ವಾನನನ್ನಾಗಿ ಮಾಡುವುದಾಗಿ ಹೇಳಿದ್ದರು. ಕೆಲವು ಸಮಯಕ್ಕೆ ನಿಮ್ಮನ್ನು ಹೆವಿವೇಟ್ ಚಾಂಪಿಯನ್ ಕೂಡ ಮಾಡುತ್ತೇವೆ ಎಂದು ತಿಳಿಸಿದ್ದರು. ನಾನು ಮತ್ತು ನಮ್ಮಸಂಗಡಿಗರು ಒಪ್ಪಿಕೊಳ್ಳುವುದೆಂದಿದ್ದೆವು. ಆದರೆ ಮೊದಲು ಅಂಡರ್ಟೇಕರ್‍ರಿಂದ ಪೆಟ್ಟು ತಿನ್ನಬೇಕು. ಇದಕ್ಕಾಗಿ ನಾವು ಪೈಸೆ ಕೊಡುತ್ತೇವೆ ಎಂದರು. ಆದರೆ ಪೆಟ್ಟು ತಿನ್ನುವ ಕೆಲಸಕ್ಕೆ ನಾವಿಲ್ಲ ಎಂದು ಆಫರ್ ತಿರಸ್ಕರಿಸಿದೆವು ಎಂದು ಸತ್ಪಾಲ್ ವಿವರಿಸಿದ್ದರು.

ಸತ್ಪಾಲ್‍ರಿಗೆ ಮಹಾಬಲಿ ಬಿರುದು ಕೊಟ್ಟದ್ದು ಇಂದಿರಾಜಿ:

ಮಹಾಬಲಿ ಸತ್‍ಪಾಲ್ ಸಿಂಗ್ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ, ಪದ್ಮಶ್ರೀ ಪದ್ಮಭೂಷಣದಂತಹ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಇದಲ್ಲದೆ ಭಾರತ ಕೇಸರಿ,ರುಸ್ತಮ್ ಎ ಹಿಂದ್ ಆಗಿದ್ದರು. ಸತ್ಪಾಲ್ ಸಿಂಗ್‍ರಿಗೆ ಮಹಾಬಲಿ ಎಂದು ಭಾರತದ ಶ್ರೀಮತಿ ಇಂದಿರಾಗಾಂಧಿ ಹೆಸರಿಟ್ಟಿದ್ದರು. ಸತ್ಪಾಲ್ 1982ರ ದಿಲ್ಲಿ ಏಶಿಯನ್ ಗೇಮ್ಸ್‍ನಲ್ಲಿ ಚಿನ್ನ ಗೆದ್ದಿದ್ದರು.ನಂತರ ಇಂದಿರಾಜಿ ಮಹಾಬಲಿ ಎಂದು ಅವರಿಗೆ ಹೆಸರಿಟ್ಟಿದ್ದರು.

Leave a Reply