ಮಂಡ್ಯ: ರಾಜಕಾರಣದಲ್ಲಿ ಕ್ಯಾಂಟೀನ್ ಹೆಚ್ಚು ಪ್ರಭಾವ ಬೀರುತ್ತದೆ ಎಂದೆನಿಸುತ್ತಿದೆ. ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಇದೀಗ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಯಡಿಯೂರಪ್ಪಜೀ ಕ್ಯಾಂಟೀನ್ ತೆರೆಯಲು ನಿರ್ದರಿಸಲಾಗಿದೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಜಿತೇಂದ್ರ ಈ ವಿಷಯ ಹೇಳಿದ್ದು ದುಡಿಯುವ ಬಡವರು, ರೈತರು, ಆಟೊ ಚಾಲಕರು, ಕಾರ್ಮಿಕರಿಗೆ ಅನುಕೂಲವಾಗಲು ₹ 5ಕ್ಕೆ ಉಪಹಾರ ಹಾಗೂ ಊಟ ನೀಡಲಾಗುವುದು ಎಂದರು.

ಮಾತ್ರವಲ್ಲ, ಮುಖ್ಯಮಂತ್ರಿ ಆಗಿದ್ದಾಗ ಜನಪರ ಕಾರ್ಯಗಳನ್ನು ಮಾಡಿದ್ದರು. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವೆಲ್ಲವನ್ನು ಮನಗಂಡು ಹಸಿವು ನೀಗಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಕ್ಯಾಂಟೀನ್‌ ತೆರೆಯಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ನಗರದ ಸುಭಾಷ್‌ ನಗರದ ಒಂದನೇ ತಿರುವಿನಲ್ಲಿ ಕ್ಯಾಂಟೀನ್‌ ತೆರೆಯಲಾಗುವುದು’ ಎಂದು ತಿಳಿಸಿದರು.

Leave a Reply