ನೊಯಿಡ: ಗಲಾಟೆ ಮಾಡಿ ಮನೆ ಬಿಟ್ಟು ಹೋದ ಹನ್ನೊಂದು ವರ್ಷದ ಬಾಲಕ ಐದು ನಿಮಿಷದಲ್ಲಿ ಬರಬೇಕು ಎಂದು ಹೇಳಿದ್ದು ತಂದೆ ಐದು ಲಕ್ಷ ಎಂದು ಕೇಳಿಸಿಕೊಂಡು ಪೇಚಿಗೆ ಬೀಳುವಂತೆ ಮಾಡಿತು.
ನೊಯಿಡದ ಚೀಜಾನ್ಸಿ ಪ್ರಾಂತದಲ್ಲಿ ಘಟನೆ ನಡೆದಿದ್ದು. ತಂದೆಯ ಅಂಗಡಿಯಿಂದ ಬಾಲಕ ಹಣ ತೆಗೆಯುತ್ತಿದ್ದ. ಇದಕ್ಕೆ ಹಲವು ಸಲ ಬಾಲಕನನ್ನು ಮನೆಯವರು ಬೈಯುತ್ತಿದ್ದರು. ಗಂಟೆಗಳ ಕಾಲ ಒಂದು ಕೋಣೆಯಲ್ಲಿ ಒಬ್ಬನನ್ನೆ ಕೂಡಿಹಾಕುತ್ತಿದ್ದರು. ಸೋಮವಾರ ಬೆಳಗ್ಗೆ ಬಾಲಕ ಹಣದ ಡ್ರಾವರ್ನಿಂದ ನೂರು ರೂಪಾಯಿ ತೆಗೆದುಕೊಂಡದ್ದು ಮನೆ ಮಂದಿ ನೋಡಿ ಬೈದಿದ್ದರು.
ಇದಕ್ಕಾಗಿ ಕೋಪದಲ್ಲಿ ಶಾಲೆಯಿಂದ ಬಾಲಕ ಮನೆಗೆ ಬರಲಿಲ್ಲ.ಒಬ್ಬ ಅಪರಿಚಿತ ವ್ಯಕ್ತಿಯ ಮೊಟಾರು ಬೈಕಿನಲ್ಲಿ ಹತ್ತಿಕೊಂಡು ಹೋಗಿದ್ದ. ಬ್ರಿಸಾಕಿ ಎಂಬಲ್ಲಿದ್ದ ಬಾಲಕ ಅಚೀಚೆ ಸುತ್ತಾಡಿ ತುಂಬ ಹೊತ್ತಾದ ಬಳಿಕ ಮನೆಗೆ ಬರಲು ಯೋಚಿಸಿದ್ದಾನೆ. ಆಗ ದಾರಿಯಲ್ಲಿ ಕಂಡ ವ್ಯಕ್ತಿಯ ಫೋನ್ ತೆಗೆದು ಮನೆಗೆ ಪೋನ್ ಮಾಡಿ ತಂದೆಯೊಂದಿಗೆ ಐದು ನಿಮಿಷದೊಳಗೆ ಇಲ್ಲಿಗೆ ಬರಬೇಕೆಂದು ಹೇಳಿದ್ದಾನೆ.
ಮನೆಯವರು ಬಾಲಕನನ್ನುಯಾರೋ ಅಪಹರಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು. ಐದು ಲಕ್ಷ ರೂಪಾಯಿ ಬಿಡುಗಡೆಗೆ ಹಣ ಕೊಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರಿಗೆ ಹೇಳಿದರು. ಫೋನ್ ಕರೆ ಮಾಡಿದ ಫೋನ್ಗೆ ಪುನಃ ಕರೆ ಮಾಡಿದಾಗ ಅದು ಸ್ವಿಚ್ಛ್ ಆಫ್ ಆಗಿದೆ ಎಂದು ಪೊಲೀಸರಿಗೆ ಹೇಳಿದರು. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಫೋನ್ ಯಾರದ್ದೆಂದು ತಿಳಿಯಿತು. ಆತ ನೀಡಿದ ವಿವರಗಳ ಆಧಾರದಲ್ಲಿ ಬೀದಿಯಲ್ಲಿ ಅಲೆದಾಡುತ್ತಿದ್ದ ಬಾಲಕ ಪತ್ತೆಯಾಗಿದ್ದಾನೆ.