ಅಮೆರಿಕ: ಪ್ರಿಯತಮೆಗೆ ಬಹಳ ಭಿನ್ನವಾದ ರೀತಿಯಲ್ಲಿ ಮದುವೆಯ ಪ್ರೊಫೆಸಲ್ ಮಾಡುತ್ತಿರುವ ಪ್ರಿಯಕರ. ಫೋಟೊಗ್ರಾಪರ್ ಮ್ಯಾಥ್ಯೂ ಡಿಪ್ಪಲ್ ಕ್ಯಾಮರದಲ್ಲಿ ಚಿತ್ರಿಸಿದ ಫೋಟೊದಲ್ಲಿರುವ ಇಬ್ಬರು ಪ್ರೇಮಿಗಳನ್ನು ಅವರು ಹುಡುಕುತ್ತಿದ್ದಾರೆ. ಅಮೆರಿಕದ ಯೋಸ್‍ಮೆಟ್ ನ್ಯಾಶನಲ್ ಪಾರ್ಕಿನ್ ಟಾಪ್ಟ್ ಪೊಯಿಂಟಿನಲ್ಲಿ ಮೊಣಕಾಲೂರಿ ಯುವಕ ಯುವತಿಗೆ ಪ್ರೊಫೆಸಲ್ ನೀಡುತ್ತಿರುವ 2000 ಅಡಿ ಎತ್ತರದ ಘಟನೆ ಅದು.

ಈ ಪ್ರೇಮಿಗಳನ್ನು ಹುಡುಕುವ ಸಲುವಾಗಿ ಮ್ಯಾಥ್ಯೂ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯ ಬಿಟ್ಟಿದ್ದಾರೆ. ಅದು ನಿಮಿಷಗಳೊಳಗೆ ವೈರಲ್ ಆಗಿದೆ. ಆದರೆ ಚಿತ್ರದಲ್ಲಿರುವ ಯುವಕ ಯುವತಿ ಇನ್ನೂ ಪತ್ತೆಯಾಗಿಲ್ಲ.

ಅಕ್ಟೋಬರ್ ಆರರಂದು ಗೆಳೆಯರೊಂದಿಗೆ ಇದ್ದಾಗ ಫೋಟೋಗ್ರಾಫರ್ ಮ್ಯಾಥ್ಯೂಗೆ ಈ ಪ್ರೇಮಿಗಳು ಕಣ್ಣಿಗೆ ಬಿದ್ದಿದ್ದರು. ಬಹಳ ಸ್ಪಷ್ಟವಲ್ಲದಿದ್ದರೂ ಆ ಚಿತ್ರವನ್ನು ಅವರು ಬಹಳ ದೂರದಿಂದ ಸೆರೆಹಿಡಿದಿದ್ದರು. ನಂತರ ಅವರು ಅಕ್ಟೋಬರ್ 17ರಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಅಪ್‍ಲೋಡ್ ಮಾಡಿದ್ದರು. ಫೇಸ್‍ಬುಕ್, ಟ್ವಿಟರ್‍ನಲ್ಲಿ ಹಲವಾರು ಮಂದಿ ಈಗಾಗಲೇ ಚಿತ್ರವನ್ನು ನೋಡಿ ಕಮೆಂಟ್ ಮಾಡಿದ್ದಾರೆ. ಆದರೆ ಈಪ್ರೇಮಿಗಳು ಯಾರೆಂದು ಪತ್ತೆಯಾಗಿಲ್ಲ. ಅವರನ್ನು ಹುಡುಕುವ ಯತ್ನದಲ್ಲಿ ಮ್ಯಾಥ್ಯೂ ಇದ್ದಾರೆ. ಅವರು ಸಿಗಬಹುದು ಎನ್ನುವ ನಿರೀಕ್ಷೆಯು ಈಗಲೂ ಅವರಲ್ಲಿದೆ.

Leave a Reply